ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಕೆಟಿಎಸ್ ಸ್ಪರ್ಧೆ ನಿಶ್ಚಿತಶಿಕ್ಷಕರ ವಲಯದಿಂದಲೂ ಕೆ.ಟಿ.ಶ್ರೀಕಂಠೇಗೌಡರ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ಬೆಂಬಲಿಗರು, ಅಭಿಮಾನಿಗಳೂ ಕೂಡ ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಲೇಬೇಕೆಂದು ಹಠ ಹಿಡಿದಿದ್ದಾರೆ. ಶಿಕ್ಷಕರ ಕ್ಷೇತ್ರವನ್ನು ಮೊದಲಬಾರಿಗೆ ಪ್ರತಿನಿಧಿಸುತ್ತಿದ್ದರೂ ಎಲ್ಲ ಶಿಕ್ಷಕರನ್ನೂ ಈಗಾಗಲೇ ಕೆ.ಟಿ.ಶ್ರೀಕಂಠೇಗೌಡರು ಎರಡೆರಡು ಬಾರಿ ತಲುಪಿದ್ದಾರೆ. ಎರಡು ಬಾರಿ ಮನವಿ ಪತ್ರಗಳನ್ನು ಕಳುಹಿಸಿದ್ದಾರೆ. ಶಿಕ್ಷಕರಿಂದಲೂ ಕೆ.ಟಿ.ಶ್ರೀಕಂಠೇಗೌಡರ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದಕ್ಕೆ ಸರಿಯದಿರಲು ತೀರ್ಮಾನಿಸಿದ್ದಾರೆ.