ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿದ ಬಂಡಿಪುರದ ಯುವ ಮಿತ್ರ ಕಾರ್ಯಕ್ರಮವಾರದಲ್ಲಿ 5 ದಿನ ವಿವಿಧ ಶಾಲೆಗಳ ಮಕ್ಕಳನ್ನು ಕರೆ ತಂದು ಬಂಡಿಪುರದ ಹಳೆ ಕ್ಯಾಂಪಸ್ ಸಭಾಂಗಣದಲ್ಲಿ ಪರಿಸರ ಶಿಕ್ಷಣ ನೀಡಿ ಬಳಿಕ, ಸಫಾರಿಗೆ ಕರೆದೊಯ್ದು ಪರಿಚಯ ಮಾಡಿಕೊಡಲಾಗುತ್ತಿತ್ತು. ಈ ಯೋಜನೆಯಲ್ಲಿ ಇದುವರೆಗೆ 162 ದಿನಗಳಲ್ಲಿ 7019 ವಿದ್ಯಾರ್ಥಿಗಳು, 655 ಶಿಕ್ಷಕರು, 197 ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ, 395 ರೈತರು, 143 ಬುಡಕಟ್ಟು ಸಮುದಾಯದವರು ಸೇರಿದಂತೆ 8410 ಮಂದಿ ಪ್ರಯೋಜನ ಪಡೆದಿದ್ದಾರೆ.