ಘೋಷಣೆಗೆ ಸೀಮಿತವಾದ ಬರಗಾಲಬಹಳ ಕಾಲದಿಂದಲೂ ವಿಜಯಪುರ ಬರದ ನಾಡು ಎಂಬ ಹಣೆಪಟ್ಟಿಕೊಂಡಿದೆ. ಈ ಬಾರಿ ಕೂಡಾ ಭೀಕರ ಬರ ಜಿಲ್ಲೆಯಲ್ಲಿ ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು ಹಾಳಾಗಿ ಅನ್ನದಾತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ರೈತರ ನೆರವಿಗೆ ಬರಬೇಕಾಗಿದ್ದ ಸರ್ಕಾರಗಳು ಬರೀ ಬರಗಾಲ ಎಂದು ಸಾರಿ ಕೈಕಟ್ಟಿಕುಳಿತುಕೊಂಡು ಬಿಟ್ಟಿವೆ. ಹೀಗಾಗಿ ಅನ್ನದಾತರರ ಅಳಲು ಕೇಳುವವರೇ ಇಲ್ಲದಂತಾಗಿದೆ.