ರಾಜಕಾರಣಿಗಳಿಗೆ ಬೆಂ.ಗ್ರಾ. ಕ್ಷೇತ್ರ ಅದೃಷ್ಟದ ಅಖಾಡ!ರಾಜಕಾರಣದಲ್ಲಿ ಅನೇಕ ನಾಯಕರಿಗೆ ಸ್ಪರ್ಧಿಸುವ ಕ್ಷೇತ್ರದಿಂದ ಅದೃಷ್ಟ ಖುಲಾಯಿಸಿದರೆ, ಕೆಲವರು ಸ್ಪರ್ಧಿಸಿದ ಕಾರಣದಿಂದಾಗಿ ಕ್ಷೇತ್ರಕ್ಕೆ ಅದೃಷ್ಟ ತಂದುಕೊಟ್ಟ ನಿದರ್ಶನಗಳು ಸಾಕಷ್ಟಿವೆ.ಇದಕ್ಕೆ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಸಂಸತ್ ಕ್ಷೇತ್ರ ಹಾಗೂ ಈಗಿನ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರ ಸಾಕ್ಷಿಯಾಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಸೋತವರು ಮತ್ತು ಸೋತು ಗೆದ್ದವರು ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.