ಆಧುನಿಕತೆಯಲ್ಲಿ ಮನಸ್ಸುಗಳು ಕಳೆದುಹೋಗುತ್ತಿವೆ: ಡಾ. ಸಿ.ಆರ್.ಚಂದ್ರಶೇಖರ್ಇಂದಿನ ಯಂತ್ರ ಯುಗದ ನಡುವೆ ಮನುಷ್ಯರು ಮತ್ತು ಮನಸ್ಸುಗಳು ಕಳೆದು ಹೋಗುತ್ತಿವೆ. ಇಂದು ಬದುಕಿನ ದೊಡ್ಡ ಸವಾಲು ಎಂದರೆ ಆರೋಗ್ಯವಾಗಿದೆ. ಅಡುಗೆ ಮಾಡುವವರಿಂದ ಹಿಡಿದು, ಜೋಗುಳ ಹಾಡುವವರು, ಕುಡಿಸುವವರ ತನಕ ಯಂತ್ರಗಳೇ ಬಂದಿವೆ. ಜನಜೀವನವೇ ಬದಲಾಗುವ ಈ ಹೊತ್ತಿನಲ್ಲಿ ಮನಸ್ಸುಗಳಿಗೆ ಬೆಲೆಯೇ ಇಲ್ಲವಾಗಿದೆ ಎಂದು ಮನಃ ಶಾಸ್ತ್ರಜ್ಞ ಡಾ.ಸಿ.ಆರ್. ಚಂದ್ರಶೇಖರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.