ಹರಿಹರ ನಗರ ಹಸಿರಿಗೆ ಲಕ್ಷ ವೃಕ್ಷೋತ್ಸವ ಸಂಕಲ್ಪಅಭಿವೃದ್ಧಿ ಪೂರಕ ಬಜೆಟ್ ಇದಾಗಿದ್ದು, ಈ ನಿಟ್ಟಿನಲ್ಲಿ ವಿನೂತನ ಸ್ಪರ್ಶ ನೀಡಿ ಯೋಜನೆ ರೂಪಿಸಲಾಗಿದೆ ಮತ್ತು ಹರಿಹರಕ್ಕೆ ಆಧುನಿಕ ಲೇಪನ, ಪ್ರಕೃತಿ ಸೌಂದರ್ಯಕ್ಕೆ ವಿಶೇಷ ಒತ್ತು, ಪ್ರವಾಸೋದ್ಯಮ, ಭವಿಷ್ಯದ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಲಕ್ಷ ವೃಕ್ಷೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಿದೆ.