ಕೃಷಿ ನಾಶ-ಸರ್ಕಾರ ರೈತರ ಪರ ನಿಂತು ಪರಿಹಾರ ನೀಡಲಿ: ಮಠಂದೂರು ಆಗ್ರಹವ್ಯಾಪಕ ಕೃಷಿ ನಾಶವಾಗಿದ್ದು, ರಾಜ್ಯ ಸರ್ಕಾರವು ರೈತರ ಪರವಾಗಿ ನಿಲ್ಲಬೇಕು. ತಕ್ಷಣವೇ ಕೃಷಿ ನಾಶಕ್ಕೆ ಪರಿಹಾರ ಒದಗಿಸಬೇಕು ಎಂದು ಪುತ್ತೂರಿನ ಮಾಜಿ ಶಾಸಕ ಹಾಗೂ ದ.ಕ.ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.