ನ್ಯೂಕ್ಲಿಯರ್ ಎನರ್ಜಿ ದೇಶ ವಿರೋಧಿ ಕೃತ್ಯಕ್ಕೆ ಬಳಕೆಯಾಗದಂತೆ ನಿಗಾ ವಹಿಸಿ: ಎಸ್.ಎಲ್. ಚೆನ್ನಬಸವಣ್ಣದಕ್ಷಿಣ ಭಾರತ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಾಗಾರ ನೆಡೆಯುತ್ತಿದ್ದು, ಇದು ಪೊಲೀಸ್ ಅಧಿಕಾರಿಗಳಿಗೆ ಹೊಸ ವಿಷಯವಾಗಿದೆ. ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್/ ವಿಕಿರಣ ಶೀಲ ವಸ್ತುಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಇವುಗಳನ್ನು ಕೈಗಾರಿಕಾ ಕ್ಷೇತ್ರದಲ್ಲಿ, ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಪರಿಸರ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಕೂಡ ಬಳಸಲಾಗುತ್ತದೆ.