ಪ್ರಭುಕುಮಾರ್ ಮೆಮೋರಿಯಲ್ ಕಪ್ ಪಂದ್ಯಕ್ಕೆ ಶಾಸಕ ಶಿವಲಿಂಗೇಗೌಡ ಚಾಲನೆಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಹಾಗೂ ವೀಕ್ಷಿಸುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಮನರಂಜನೆ ಮಾತ್ರ ದೊರೆಯುವುದಿಲ್ಲ. ಪರಸ್ಪರ ಪ್ರೀತಿ ವಿಶ್ವಾಸ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ಹೇಳಿದರು. ರಾಜಕೀಯ ಕ್ಷೇತ್ರದ ಮೂಲಕ ಜನರ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಶಾಸಕ ಶಿವಲಿಂಗೇಗೌಡರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜತೆಗೆ ಈ ರೀತಿಯ ಆಟೋಟ ಸ್ಪರ್ಧೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಜಾನಪದ ಉತ್ಸವಗಳಿಗೆ, ಜನಪರ ಹೋರಾಟಗಳಿಗೆ, ಹೆಚ್ಚಿನ ನೆರವಾಗುವ ಸಹಕಾರ ನೀಡುತ್ತಾ ಬಂದಿರುವುದರಿಂದ ಸತತ ನಾಲ್ಕು ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗುವ ಮೂಲಕ ಯುವ ರಾಜಕಾರಣಿಗಳಿಗೆ ಆದರ್ಶ ರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.