ಮಳೆಯಿಂದ ೨೦ ಕೋಟಿಗೂ ಅಧಿಕ ನಷ್ಟ ವಿಪರೀತ ಮಳೆಯಿಂದ ಸುಮಾರು ಕ್ಷೇತ್ರ ವ್ಯಾಪ್ತಿಯಲ್ಲಿ ೨೦ ಕೋಟಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ೫೦ ಅಂಗನವಾಡಿ, ೨೬೫ ಶಾಲೆ, ೨೩ ರಸ್ತೆ, ೧೫ ಸೇತುವೆಗೆ ಹಾನಿಯಾಗಿದ್ದು, ೧೦ ಕಡೆ ಭೂಕುಸಿತವಾಗಿದೆ. ಇದರ ಜೊತೆಗೆ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಗಾಳಿಮಳೆಗೆ ಮುರಿದು ಹೋಗಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.