• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸ್ಥಳೀಯರಿಗೆ ಹುಡಾ ಅಧ್ಯಕ್ಷ ಸ್ಥಾನ ನೀಡುವಂತೆ ಪ್ರತಿಭಟನೆ
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಹುದ್ದೆಯನ್ನು ಹಾಸನ ನಗರದ ವ್ಯಾಪ್ತಿಯಲ್ಲಿರುವಂತಹ ಸ್ಥಳೀಯ ಕಾರ್ಯಕರ್ತರಿಗೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಬಿ.ಎಂ. ರಸ್ತೆ ತಡೆ ನಡೆಸಿ ಬಳಿಕ ಹುಡಾ ಕಚೇರಿ ಮುಂದೆ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಬಂದು ಸುಮಾರು ಎರಡು ವರ್ಷಗಳ ಕಾಲ ಕಳೆದರೂ ಸಹ ಈವರೆಗೂ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಸರ್ಕಾರಿ ನಾಮಿನಿ ಮಾಡದೇ ಇರುವುದು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಸರ್ಕಾದ ಮುಖಂಡರ ಮೇಲೆ ಬೇಸರ ಬರಲು ಕಾರಣವಾಗಿದೆ ಎಂದು ದೂರಿದರು.
ಹೊರಗಿನವರಿಗೆ ನೀಡಿದರೆ ಕಾರ್ಯಕರ್ತರಿಂದಲೇ ಹೋರಾಟ
ಈಗಾಗಲೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ೨ ವರ್ಷಗಳು ಕಳೆದಿರುತ್ತದೆ. ಇದುವರೆಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿರುವುದಿಲ್ಲ. ಇದರಿಂದಾಗಿ ಹಾಸನ ನಗರದ ಸರ್ವತಮುಖ ಅಭಿವೃದ್ಧಿ ಕುಂಠಿತವಾಗಿರುತ್ತದೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಹಾಸನದ ಪ್ರಾಧಿಕಾರಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಮುಖಂಡರು ಅಥವಾ ಕಾರ್ಯಕರ್ತರನ್ನು ನೇಮಿಸುವ ಮೂಲಕ ಹಾಸನ ನಗರದ ಅಭಿವೃದ್ಧಿಗೆ ಸಹಕರಿಸಲು ಸರ್ಕಾರವನ್ನು ಒತ್ತಾಯಿಸುತ್ತೇವೆ. ಅಧ್ಯಕ್ಷ ಸ್ಥಾನಕ್ಕೆ ಸ್ಥಳೀಯರನ್ನು ನೇಮಕ ಮಾಡದೆ ಬೇರೆ ಕ್ಷೇತ್ರದ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಅಭಿವೃದ್ಧಿಗೆ ವೃದ್ಧಿಗೆ ಕುಂಠಿತವಾಗುತ್ತದೆ ಎಂದರು.
ಕಾಡಂಚಿನ ಪ್ರದೇಶದಲ್ಲಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತಿಲ್ಲ
ಕಾಡಂಚಿನ ಪ್ರದೇಶದಲ್ಲಿ ಸುರಕ್ಷತೆ ದೃಷ್ಟಿಗಾಗಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕಾಡುಪ್ರಾಣಿಗಳನ್ನು ನಾಶ ಮಾಡುವುದು ಘೋರ ಅಪರಾಧವಾಗುತ್ತದೆ. ಮಳೆ, ಗಾಳಿ ಇದ್ದ ಸಂದರ್ಭದಲ್ಲಿ ಮರಗಿಡಗಳು ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿರುತ್ತದೆ. ತಂತಿಯಲ್ಲಿ ವಿದ್ಯುತ್ ಪ್ರಸರಿಸುತ್ತಿರುವುದು ಕಣ್ಣಿಗೆ ಕಾಣುವುದಿಲ್ಲ. ಆಕಸ್ಮಿಕವಾಗಿ ಸ್ಪರ್ಶಿಸಿದರೆ ಕೆಲ ಸೆಕೆಂಡ್ ಸಮಯದಲ್ಲಿ ಪ್ರಾಣ ಹಾರಿ ಹೋಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಜಾಗ್ರತೆಯಿಂದ ಇರಬೇಕು. ಕಳ್ಳತನ, ದುರುಪಯೋಗದಂತಹ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದ ಸೆಸ್ಕ್ ಜಾಗೃತದಳ ಇಲಾಖೆಗೆ ತಿಳಿಸಬೇಕು ಎಂದರು.
ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಲಾಭ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಿತಾಂಶ ಈಗಾಗಲೇ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಬೆಳಕು ಮೂಡಿಸುತ್ತಿದ್ದು, ಅದರಲ್ಲೂ "ಶಕ್ತಿ ಯೋಜನೆ " ಮೂಲಕ ಉಚಿತ ಬಸ್ ಪ್ರಯಾಣ ಅವಕಾಶದಿಂದ ಲಕ್ಷಾಂತರ ಮಹಿಳೆಯರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು. ಈ ಯೋಜನೆಯಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು, ತಮ್ಮದೇ ಆದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇದೊಂದು ಸಾಮಾಜಿಕ ಕ್ರಾಂತಿಯೆಂದು ಕರೆಯಬಹುದಾದ ಯೋಜನೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯೇಗಬೇಕಿದ್ದ ಸ್ಥಿತಿ ಅಧೋಗತಿ
ಚನ್ನರಾಯಪಟ್ಟಣ- ಹೊಳೆನರಸೀಪುರ ಮಾರ್ಗವಾಗಿ ಬೂವನಹಳ್ಳಿ ಕ್ರಾಸ್ ಗಡಿ ಭಾಗದಿಂದ ಕಳ್ಳಿಮುದ್ದನಹಳ್ಳಿ, ಹೆತ್ತಗೌಡನಹಳ್ಳಿ, ಬೈಚನಹಳ್ಳಿ, ಹೊಡಿಕೆಕಟ್ಟೆ, ಚಿಕ್ಕಗಾವನಹಳ್ಳಿ, ದೇವರಹಳ್ಳಿ, ಹೊನ್ನವಳಿ ಬಳಿ ಅಲ್ಲಲ್ಲಿ ಡಾಂಬರು ಕಿತ್ತು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅರಕಲಗೂಡಿನ ಚನ್ನಬಸವೇಶ್ವರ ವೃತ್ತದಿಂದ ಆರಂಭವಾಗುವ ಗುಂಡಿ ಹೊಂಡಗಳು ಚನ್ನರಾಯಪಟ್ಟಣದ ಗನ್ನಿಕಡ ತನಕ ಹೆಜ್ಜೆಗೊಂದು ಬಾಯ್ತೆರೆದು ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನಗಳ ಅಪಘಾತ ದಿನನಿತ್ಯ ತಪ್ಪದಾಗಿದೆ. ಮೈಸೂರಿಗೆ ತೆರಳಲು ಹೊಳೆನರಸೀಪುರ ಮಾರ್ಗದ ಬದಲು ಅರಕಲಗೂಡಿನಿಂದ ಕೇರಳಾಪುರ ಇಲ್ಲವೇ ಪಿರಿಯಾಪಟ್ಟಣ ಮಾರ್ಗವಾಗಿ ವಾಹನಗಳು ಓಡಾಡುವಂತಾಗಿದೆ.
ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮ ಕೇಂದ್ರದಲ್ಲಿ ಪತ್ರಿಕಾ ದಿನಾಚರಣೆ
ದೇಶದ ಗಟ್ಟಿಯಾದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ಅತಿ ಮುಖ್ಯವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದ್ದಾರೆ. ಸಮಾಜಕ್ಕೆ ಮಾಧ್ಯಮದ ಸೇವೆ ಅಗತ್ಯವಿದೆ. ತಾಲೂಕು ಹಂತದಲ್ಲಿ ಉತ್ತಮ ಪತ್ರಕರ್ತರ ಭವನ ಚನ್ನರಾಯಪಟ್ಟಣದಲ್ಲಿ ನಿರ್ಮಾಣವಾಗಿದ್ದು, ಭವನ ನಿರ್ಮಾಣ ಹಾಗೂ ಕ್ಷೇಮನಿಧಿಗೆ ಸಹಕಾರ ನೀಡಿದ್ದನ್ನು ಸ್ಮರಿಸಿ, ದ್ವೇಷ ಅಸೂಯೆ ದೂರ ಇಟ್ಟು ಶಾಂತಿಯ ಬದುಕು ನಮ್ಮದಾಗಬೇಕು. ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದ್ದು, ಬಸ್‌ಗಳ ಸಂಖ್ಯೆ ಕಡಿಮೆಯಾಗಬಾರದು ಎಂದು ಮುಖ್ಯಮಂತ್ರಿಗಳಿಗೆ ಮಾಧ್ಯಮದ ಮೂಲಕ ತಿಳಿಸಿ, ಪತ್ರಕರ್ತರ ಕುಟುಂಬಕ್ಕೂ ಉಚಿತ ಬಸ್‌ಪಾಸ್ ನೀಡಲಿ ಎಂದರು.
ಲಯನ್ಸ್ ಸಂಸ್ಥೆ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ದೇಶಾದ್ಯಂತ ೨೬ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದ್ದು ಎಲ್ಲಾ ಸಂಘಸಂಸ್ಥೆಗಳ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಲ.ರಶ್ಮಿ ಸೋಮಯ್ಯ ಹೇಳಿದರು. ಮಾಜಿ ಜಿಪಂ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, ೧೯೯೯ರಲ್ಲಿ ಪಾಕಿಸ್ತಾನದ ನರಿ ಬುದ್ಧಿಯ ವಿರುದ್ಧವಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪಾಕಿಸ್ತಾನ ವಿರುದ್ಧ ಯುದ್ಧ ಘೋಷಣೆ ಮಾಡಿದರು. ಈ ಯುದ್ಧದಲ್ಲಿ ೫೫೦ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಪ್ರಾಣತ್ಯಾಗ ಮಾಡಿದ್ದರ ಪರಿಣಾಮ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ ಎಂದರು.
ವಸ್ತುನಿಷ್ಠ ವರದಿಗಳಿಂದ ಪತ್ರಿಕೆಗಳಿಗೆ ಮಹತ್ವ: ಸ್ವಾಮೀಜಿ
ದಿನಪತ್ರಿಕೆಗಳಲ್ಲಿ ಬರುವಂತಹ ಸುದ್ದಿಗಳ ವಿಚಾರಗಳು ದಾಖಲೆಗಳಾಗಿದ್ದು, ಯಾವುದೇ ಘಟನೆಗಳಿಗೆ ಸಂಬಂಧಪಟ್ಟಂತೆ ಸಾಕ್ಷೀಕರಿಸಲು ಪತ್ರಿಕಾ ವರದಿಗಳು ಬಹುಮುಖ್ಯ ಪಾತ್ರ ವಹಿಸುವಲ್ಲಿ ಸಹಕಾರಿಯಾಗಿವೆ. ಇದರಿಂದ ಮುದ್ರಣ ಮಾಧ್ಯಮಗಳು ಬಲವಾಗಿ ನೆಲೆಯಾಗಿರಲು ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಮಹಾಸ್ವಾಮೀಜಿ ನುಡಿದಿದ್ದಾರೆ.
ಯೂರಿಯಾ ಕೊಡಿ, ಇಲ್ಲದಿದ್ದರೆ ವಿಷವಾದ್ರೂ ಕೊಡಿ
ಅಸಮರ್ಪಕ ಯೂರಿಯಾ ಪೂರೈಕೆ ಹಿನ್ನೆಲೆ ವಿವಿಧ ಗ್ರಾಮಗಳ ನೂರಾರು ರೈತರು ತಹಸೀಲ್ದಾರ್ ಕಚೇರಿ ಮುತ್ತಿಗೆ ಹಾಕಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.
ಭಗವಂತನಲ್ಲಿ ನಂಬಿಕೆ, ಪೂಜೆ ಸನಾತನ ಪದ್ಧತಿಗಳಾಗಿವೆ: ಶಾಸಕ ದೇವೇಂದ್ರಪ್ಪ
ಲೋಕಕಲ್ಯಾಣ, ಕ್ಷೇತ್ರದಲ್ಲಿ ಉತ್ತಮ ಮಳೆ- ಬೆಳೆಯಾಗಿ ಸರ್ವರೂ ಆರೋಗ್ಯ, ನೆಮ್ಮದಿಯಿಂದ ಬದುಕಲಿ ಎಂದು ಪ್ರಾರ್ಥಿಸಿ, ಶ್ರಾವಣ ಸೋಮವಾರ ಹಿನ್ನೆಲೆ ಉರುಳು ಸೇವೆ ಸಂಕಲ್ಪ ಮಾಡಿಕೊಂಡಿದ್ದೆ. ಹೀಗಾಗಿ ಐತಿಹಾಸಿಕ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯ ನೆರವೇರಿಸಿದ್ದೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.
  • < previous
  • 1
  • ...
  • 132
  • 133
  • 134
  • 135
  • 136
  • 137
  • 138
  • 139
  • 140
  • ...
  • 12802
  • next >
Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved