ಅಕ್ಟೋಬರ್ 27ಕ್ಕೆ ಹೇಮರೆಡ್ಡಿ ಮಲ್ಲಮ್ಮ ಶಿಲಾಮಂದಿರ ಅನಾವರಣ: ಹನುಮಂತಗೌಡಸಾರಥಿ ಗ್ರಾಮದಲ್ಲಿ ಅ.27 ರಂದು ಮಹಾಸಾದ್ವಿ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಗಣಪತಿಯ ನೂತನ ಶಿಲಾಮಂದಿರ ಅನಾವರಣ ಹಾಗೂ ಪ್ರಾಣ ಪತಿಷ್ಠಾಪನೆ, ಗೋಪುರ ಕಳಸಾರೋಹಣ, ಸರ್ವಧರ್ಮ ಸಮನ್ವಯ ಭಾವೈಕ್ಯತೆ ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಟ್ರಸ್ಟ್ ಅಧ್ಯಕ್ಷ ಜಿ.ಹನುಮಂತಗೌಡ ತಿಳಿಸಿದರು.