ಸಾರಾಂಶ
ಪಕ್ಷಿಕೆರೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗರ್ಭ ಕೊರಳಿನ ಮತ್ತು ಸ್ತನ ಕ್ಯಾನ್ಸರ್ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸುಮಾರು ೧೦೦ಕ್ಕೂ ಹೆಚ್ಚು ಮಹಿಳೆಯರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಪಕ್ಷಿಕೆರೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗರ್ಭ ಕೊರಳಿನ ಮತ್ತು ಸ್ತನ ಕ್ಯಾನ್ಸರ್ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ರೋಟರಿ ಕ್ಲಬ್ ಕಿನ್ನಿಗೋಳಿ ಹಾಗೂ ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ಅತ್ತೂರು ಕೆಮ್ರಾಲ್ ಒಕ್ಕೂಟ, ಕೋರ್ದಬ್ಬು ಸಂಜೀವಿನಿ ಒಕ್ಕೂಟ ಕೆಮ್ರಾಲ್, ವೈದ್ಯನಾಥ ಮಹಿಳಾ ಮಂಡಳಿ ಪಕ್ಷಕೆರೆ, ಶ್ರೀ ನಾಗಬ್ರಹ್ಮ ಮಹಿಳಾ ಮಂಡಳಿ ಹೊಸಕಾಡು, ನವಜ್ಯೋತಿ ಮಹಿಳಾ ಮಂಡಳಿ ಪಂಜ- ಕೊಯಿಕುಡೆ, ಹರಿಪಾದ ಜಾರಂತಾಯ ಮಹಿಳಾ ಮಂಡಳಿ ಪಂಜ- ಕೊಯಿಕುಡೆ, ಸುರಗಿರಿ ಮಹಿಳಾ ಮತ್ತು ಯುವತಿ ಮಂಡಳಿ ಸುರಗಿರಿ, ಶ್ರೀ ಕೃಷ್ಣ ಮಹಿಳಾ ಮಂಡಳಿ ಅತ್ತೂರು ಕಾಪಿಕಾಡು ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಮುಕ್ಕದ ಶ್ರೀನಿವಾಸ್ ಮೆಡಿಕಲ್ ಕಾಲೇಜ್ ನ ಡಾ.ಲಿನ್ಸೆಲ್ ಡಿಸೋಜಾ ಮತ್ತು ಮೂಡುಬಿದಿರೆ ರೋಟರಿಯ ಡಾ.ಹರೀಶ್ ನಾಯಕ್ ಮೂಡುಬಿದಿರೆ ಮಾಹಿತಿ ನೀಡಿದರು.ಮಂಡಳಿ ಅಧ್ಯಕ್ಷ ರಾಜೇಶ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸರಸ್ವತಿ ಹಾಗೂ ಜಂಟಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಕಾರಿಗಳು ಇದ್ದರು.
ಮಂಡಳಿಯ ಗೌರವಾಧ್ಯಕ್ಷ ಹಾಗೂ ರೋಟರಿ ಕ್ಲಬ್ ಕಿನ್ನಿಗೋಳಿಯ ಅಧ್ಯಕ್ಷ ಧನಂಜಯ ಪಿ ಶೆಟ್ಟಿಗಾರ್ ಸ್ವಾಗತಿಸಿದರು. ಮಹಿಳಾ ಮಂಡಳಿಯ ಕೋಶಾದಿಕಾರಿ ವಿನಯಲತ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು ೧೦೦ಕ್ಕೂ ಹೆಚ್ಚು ಮಹಿಳೆಯರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.