ಸಂಶೋಧನಾ ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಹಳ ಪ್ರಾಮುಖ್ಯ

| Published : Jun 25 2024, 12:33 AM IST

ಸಂಶೋಧನಾ ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಹಳ ಪ್ರಾಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಉನ್ನತ ಶಿಕ್ಷಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಹಳ ಪ್ರಾಮುಖ್ಯವಾದುದು ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಉನ್ನತ ಶಿಕ್ಷಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಹಳ ಪ್ರಾಮುಖ್ಯವಾದುದು ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಭಾಂಗಣದಲ್ಲಿ ಎರಡು ದಿವಸಗಳ ಕಾಲ ಆಯೋಜಿಸಿರುವ ಸಂಶೋಧನಾ ವಿಧಾನದ ಅಡಿಯಲ್ಲಿ ದತ್ತಾಂಶ ವಿಶ್ಲೇ಼ಣೆಯಲ್ಲಿ ಬಳಸುವ ಸಮಾಜ ವಿಜ್ಞಾನದ ಸಾಂಖ್ಯೀಕ ಹೊದಿಕೆ (ಎಸ್‌.ಪಿ.ಎಸ್.ಎಸ್.) ಎಂಬ ವಿಷಯದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ಸಂಖ್ಯಾಶಾಸ್ತ್ರ ವಿಶ್ಲೇ಼ಷಣೆಯಲ್ಲಿ ಆಯಾ ಕಾಲಮಾನಗಳಿಗೆ ಸರಿಯಾದ ನವೀಕರಣದ ಜ್ಞಾನ ಪಡೆಯಬೇಕು. ಎಸ್‌.ಪಿ.ಎಸ್.ಎಸ್. ಸಾಂಖ್ಯೀಕ ವಿಶ್ಲೇಷಣೆಗೆ ದತ್ತಾಂಶಗಳನ್ನು ಆಧರಿಸಿದಂತೆ ಸಂಶೋಧನೆ ಪರಿಣಾಮಕಾರಿ ಹಾಗೂ ಸಮಾಜಕ್ಕೆ, ಸರ್ಕಾರಕ್ಕೆ ಶೈಕ್ಷಣಿಕ ಸಂಸ್ಥೆಗಳಿಗೆ ಫಲಪ್ರದವಾಗಲು ಶ್ರಮಿಸಬೇಕು ಎಂದರು.ವಿದ್ಯಾರ್ಥಿಯು ತಮ್ಮ ಸಂಶೋಧನೆಗಳ ಶೈಕ್ಷಣಿಕ ಪಯಣದಲ್ಲಿ ತನ್ನ ಸಂಶೋದನೆಯಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ವಾಸ್ತವಿಕೆಗಳನ್ನು ಆಧರಿಸಿದಂತೆ ಶೈಕ್ಷಣಿಕ ಸಂಶೋಧನೆ ನಡೆಯಬೇಕು. ಸಂಶೋಧನಾ ಪರಿಕಲ್ಪನೆಗಳು ಸಂಶೋಧನಾ ಉದ್ಧೇಶಗಳು ಸಂಶೋಧನೆಯ ಅಂತಿಮ ಹಂತದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಸಂಶೋಧನೆಗಳು ಸಾಗಬೇಕು. ಪ್ರಾಥಮಿಕ ಅಥವಾ ದ್ವಿತೀಯ ಸಂಶೋಧಕ ಆಧಾರಗಳನ್ನು ಪ್ರಾಮಾಣಿಕವಾಗಿ ಹುಡುಕಿದರೆ ಎಸ್‌.ಪಿ.ಎಸ್.ಎಸ್ ಪ್ಯಾಕೇಜ್‌ ನಲ್ಲಿ ಉತ್ತರ ದೊರೆಯಲಿದೆ ಎಂದರು.ಸಂಶೋಧನಾ ವಿದ್ಯಾರ್ಥಿಗಳು ಕನಿಷ್ಠ 5 ಸಂಶೋಧನಾ ಪ್ರಬಂಧಗಳನ್ನು ಅಧ್ಯಯನ ಮಾಡಬೇಕು. 50 ಸಂಶೋಧನಾ ಪುಸ್ತಕಗಳನ್ನು ಓದಬೇಕು ಹಾಗೂ ಸುಮಾರು ೫೦೦ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಅಧ್ಯಯನ ಮಾಡಬೇಕು. ಅವುಗಳ ಅವಲೋಕನ ತಮ್ಮ ಸಂಶೋಧನೆಗಳಿಗೆ ಸ್ವ-ಮೌಲ್ಯಮಾಪನ ಮಾಡಿಕೊಳ್ಳಲು ಜ್ಞಾನ ಇಮ್ಮಡಿಗೊಳ್ಳುತ್ತದೆ. ವಿಶ್ವವಿದ್ಯಾಲಯಗಳು ಕಲಿಕಾ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳಿಗೆ ಸ್ನೇಹಮಯವಾಗಿರಬೇಕು ಹಾಗೂ ಜ್ಞಾನದ ತಾಣವಾಗಿರಬೇಕು ಎಂದು ತಿಳಿಸಿದರು.ಶಿಕ್ಷಣಶಾಸ್ತ್ರ ವಿಭಾಗದ ಡೀನ್‌ ಪ್ರೊ.ಎಂ.ಸಿ.ರ‍್ರಿಸ್ವಾಮಿ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನೆಗಳು ಗುಣಾತ್ಮಕತೆಯಿಂದ ಕೂಡಿರಬೇಕು. ಸತ್ಯಶೋಧನೆಯ ಸಂಶೋಧನೆ ವಾಸ್ತವ ಅಂಶಗಳು ಶೋಧನೆಯಲ್ಲಿ ಪ್ರತಿಬಿಂಬಿಸಬೇಕಾಗಿದೆ. ಯಾವುದೇ ಸಂಶೋಧನೆ ಪ್ರಾಥಮಿಕ ಅಥವಾ ದ್ವಿತೀಯ ಮೂಲದಲ್ಲಿ ದೊರೆಯುವ ಮೂಲಾಧಾರಗಳು ಸಂಶೋಧನೆಗಳು ಸಮಸ್ಯೆಗೆ ಪರಿಹಾರ ಹುಡುಕುತ್ತವೆ. ಆ ಮೂಲಾಧಾರಗಳ ಕಡೆ ಸಂಶೋಧಕನ ದೃಷ್ಟಿ-ಬೌದ್ಧಿಕತೆ-ಪ್ರಾಮಾಣೀಕತೆ–ಪಕ್ಷಿನೋಟ ಇರಬೇಕು ಎಂದರು.ಎರಡು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಸ್ಯಾಮಸನ್ ಆರ್.ವಿಕ್ಟರ್‌ ಅವರು 6 ತಾಂತ್ರಿಕ ಸಮಾವೇಶಗಳನ್ನು ಎಸ್‌.ಪಿ.ಎಸ್.ಎಸ್ ಗೆ ಸಂಬಂಧಿಸಿದಂತೆ ಸಂಖ್ಯಾಶಾಸ್ತ್ರ, ದತ್ತಾಂಶ, ಚರಾಂಶಗಳ ಅರ್ಥೈಸುವಿಕೆ, ಪರಿಕಲ್ಪನೆಗಳ ಪರೀಕ್ಷಿಸುವಿಕೆ ಹಾಗೂ ಸಹಸಂಬಂಧಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕಾರ‍್ಯಕ್ರಮದಲ್ಲಿ ಎರಡು ದಿನಗಳ ಕಾರ‍್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಧ್ಯಪ್ರದೇಶದ ಅಮರ ಕಂಟಕದ ಇಂದಿರಾಗಾಂಧಿ ರಾಷ್ತ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಅಧ್ಯಾಪಕ ಡಾ.ಸ್ಯಾಮಸನ್‌ ಆರ್.ವಿಕ್ಟರ್‌ ಹಾಗೂ ಶಿಕ್ಷಣ ವಿಭಾಗದ ಬೋಧಕರಾದ ಡಾ.ಸುಷ್ಮಾ. ಆರ್. ಮತ್ತು ಡಾ.ಕನಕಪ್ಪ ಪೂಜಾರ ಉಪಸ್ಥಿತರಿದ್ದರು.ಕಾರ್ಯಾಗಾರದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಹಾಗೂ ವಿವಿಧ ಸ್ನಾತಕೊತ್ತರ ವಿಭಾಗಗಳ ಅಧ್ಯಯನ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಒಟ್ಟು 66 ಭಾಗವಹಿಸಿದ್ದರು. ಮುರುಗೇಶ ಸ್ವಾಗತಿಸಿದರು. ಪ್ರಿಯಾ ಬೀಳಗಿ ವಂದಿಸಿದರು. ರಚನಾ ಪೂಜಾರ ನಿರೂಪಿಸಿದರು.