ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಸೇವಾ ಶುಲ್ಕ ನೀಡಿ

| Published : Jul 04 2024, 01:05 AM IST

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಸೇವಾ ಶುಲ್ಕ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಇರುವ ಇ-ಕೆವೈಸಿ ಸೇವಾ ಶುಲ್ಕ ನೀಡಬೇಕು. ಎಲ್ಲಾ ಸಗಟು ದಾಸ್ತಾನು ಮಳಿಗೆಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಾಜ್ಯ ಸರ್ಕಾರ ಪಡಿತರದ ಬದಲು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಪದಾರ್ಥ ವಿತರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಇರುವ ಇ-ಕೆವೈಸಿ ಸೇವಾ ಶುಲ್ಕ ನೀಡಬೇಕು. ಎಲ್ಲಾ ಸಗಟು ದಾಸ್ತಾನು ಮಳಿಗೆಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಾಜ್ಯ ಸರ್ಕಾರ ಪಡಿತರದ ಬದಲು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಪದಾರ್ಥ ವಿತರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಒತ್ತಾಯಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡಲು ಬಯಸಿದ್ದ ಹೆಚ್ಚುವರಿ ಐದು ಕೆ.ಜಿ.ಅಕ್ಕಿ ದೊರೆಯದ ಕಾರಣ ಹಣ ನೀಡುತ್ತಿದೆ. ಹಣ ನೀಡುವ ಬದಲು ಬೆಳೆ, ಸಕ್ಕರೆ, ಉಪ್ಪು ಇನ್ನಿತರ ಪದಾರ್ಥಗಳನ್ನು ನೀಡುವುದರಿಂದ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುತ್ತಿರುವ ಐದು ಕೆ.ಜಿ.ಅಕ್ಕಿ ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆಯಡಿ ನೀಡುತ್ತಿರುವ ಅಕ್ಕಿಯಾಗಿದೆ. ರಾಜ್ಯ ಸರ್ಕಾರ ಅಕ್ಕಿಯ ಬದಲಾಗಿ ನೀಡುವ ಹಣವೂ ಸಹ ಕಳೆದ ನಾಲ್ಕು ತಿಂಗಳಿನಿಂದ ಪಡಿತರ ಚೀಟಿದಾರರ ಖಾತೆಗೆ ವರ್ಗಾವಣೆ ಆಗಿಲ್ಲ. ಸರ್ಕಾರದ ಮೇಲಿನ ಅಪಾದನೆಗೂ ಮುಕ್ತಿ ಸಿಗಲಿದೆ ಎಂದರು.

ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿರುವ ಸುಮಾರು 20 ಸಾವಿರ ಪಡಿತರ ವಿತರಕರು 2017ರಲ್ಲಿ ಒಂದು ಕಾರ್ಡ್‌ಗೆ ₹ 20 ಗಳಂತೆ ಇ-ಕೆವೈಸಿ ಮಾಡಿದ ಸುಮಾರು ₹ 18 ಕೋಟಿ ಸೇವಾ ಶುಲ್ಕ ಬಾಕಿ ಬರಬೇಕಿದೆ. ಶೇ .97 ರಷ್ಟು ಇ-ಕೆವೈಸಿ ಕೆಲಸ ಪೂರ್ಣಗೊಂಡು 7 ವರ್ಷ ಕಳೆದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಎಲ್ಲಾ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಡಿತರ ವಿತರಕರು ಕಷ್ಟಪಟ್ಟು ಮಾಡಿದ ಕೆಲಸಕ್ಕೂ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿರುವುದು ಸರಿಯಲ್ಲ. ಕೂಡಲೇ ಬಾಕಿ ಬಿಡುಗಡೆಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಹೇಳಿದರು.

ಸರ್ಕಾರ ಆಹಾರ ಪಡಿತರ ವಿತರಕರಿಗೆ ನೀಡುತ್ತಿರುವ ಕಮಿಷನ್ ತೀರ ಕಡಿಮೆಯಿದೆ. 2023ರ ನವೆಂಬರ್ 9 ಹೋರಾಟ ಮತ್ತು ಚಳಿಗಾಲದ ಆಧಿವೇಶನದ ಹೋರಾಟದ ಫಲವಾಗಿ, ಕ್ವಿಂಟಾಲ್‌ಗೆ ನೀಡುತ್ತಿದ್ದ ₹ 124 , ₹ 150ಗೆ ಹೆಚ್ಚಿಸಲಾಗಿದೆ. ಆದರೆ ಬೇರೆ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ಅತ್ಯಂತ ಕಡಿಮೆಯಿದೆ. ಹಾಗಾಗಿ ಕರ್ನಾಟಕದವರೇ ಆದ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಕಮಿಷನ್‌ನ್ನು ಕ್ಚಿಂಟಾಲ್‌ಗೆ ಕನಿಷ್ಠ ₹ 200ಗೆ ಹೆಚ್ಚಿಸುವಂತೆ ಮನವಿ ಮಾಡಿದರು. ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಚನ್ನಕೇಶವೇಗೌಡ,ಉಪಾಧ್ಯಕ್ಷ ಕೆ.ಎಲ್.ರಾಮಚಂದ್ರ, ಕೆ.ಬಿ.ಉಮೇಶಚಂದ್ರ, ಜಿಲ್ಲಾಧ್ಯಕ್ಷ ನಟರಾಜ್, ಚಿ.ನಾಹಳ್ಳಿ ತಾಲೂಕು ಅಧ್ಯಕ್ಷ ಬೀರಲಿಂಗಯ್ಯ, ಪಾವಗಡ ತಾಲೂಕು ಅಧ್ಯಕ್ಷ ಕೆ.ನಾಗರಾಜು, ಕಾರ್ಯದರ್ಶಿ ಪಿ.ಆರ್.ವಿ.ಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್ ಉಪಸ್ಥಿತರಿದ್ದರು.