ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷದಿಂದ ಒಂಟಿ ಮನೆ ಮತ್ತು ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಫ್ಲ್ಯಾಟ್‌ ಖರೀದಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಮಂದಿಯ ಸ್ವಂತ ಸೂರಿನ ಕನಸು ಇನ್ನೂ ನನಸಾಗಿಲ್ಲ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷದಿಂದ ಒಂಟಿ ಮನೆ ಮತ್ತು ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಫ್ಲ್ಯಾಟ್‌ ಖರೀದಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಮಂದಿಯ ಸ್ವಂತ ಸೂರಿನ ಕನಸು ಇನ್ನೂ ನನಸಾಗಿಲ್ಲ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿ (ಬಿಬಿಎಂಪಿ) ಪ್ರತಿ ವರ್ಷ ಬಜೆಟ್‌ನಲ್ಲಿ ಕಲ್ಯಾಣ ಕಾರ್ಯಕ್ರಮದಡಿ ನಗರದ ವಸತಿ ರಹಿತರಿಗೆ ವಸತಿ ಕಲ್ಪಿಸಲು ಕೋಟ್ಯಂತರ ರು. ಅನುದಾನ ಮೀಸಲಿಡಲಿದೆ. ಹೀಗೆ 2022-23, 2023-24 ಹಾಗೂ ಪ್ರಸ್ತುತ 2024-25 ನೇ ಸಾಲು ಸೇರಿ ಮೂರು ವರ್ಷದಿಂದ ಮೀಸಲಿಟ್ಟ ಅನುದಾನದಲ್ಲಿ ಒಂದೇ ಒಂದು ರುಪಾಯಿ ವೆಚ್ಚವಾಗಿಲ್ಲ. ಅರ್ಜಿ ಸಲ್ಲಿಸಿದ ಯಾರೊಬ್ಬರಿಗೂ ಸಹಾಯಧನದ ಭಾಗ್ಯ ಸಿಕ್ಕಿಲ್ಲ.

ತಲಾ 5 ಲಕ್ಷ ರು. ಸಹಾಯಧನ ಪಡೆಯಲು ಕಳೆದ ಮೂರು ವರ್ಷದಿಂದ ಅರ್ಜಿ ಸಲ್ಲಿಸಿದವರ ದಾಖಲೆ ಪರಿಶೀಲನೆ, ಆಯ್ಕೆ ಪ್ರಕ್ರಿಯೆ ಮತ್ತಿತರ ಕಾರ್ಯಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಆದರೆ, ಇದು ಯಾವಾಗ ಪೂರ್ಣಗೊಳ್ಳಲಿದೆ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

288 ಕೋಟಿ ಮೀಸಲು: ಪ್ರತಿ ವರ್ಷ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದ ಪೈಕಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ಹೊರತು ಪಡಿಸಿ ಉಳಿದ ಅನುದಾನ ವಾಪಸ್ ಆಗಲಿದೆ. ಅದೇ ರೀತಿ 2022-23 ಹಾಗೂ 2023-24ರಲ್ಲಿ ಮೀಸಲಿಟ್ಟ ಅನುದಾನ ವಾಪಸ್‌ ಆಗಿದೆ. ಎಸ್ಸಿ,ಎಸ್ಟಿ ವರ್ಗದ ಮೀಸಲಿಟ್ಟ ಅನುದಾನ ಸೇರಿ 2024-25ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು 287.79 ಕೋಟಿ ರು. ಮೀಸಲಿಡಲಾಗಿದೆ.

ಈ ಪೈಕಿ 2022-23 ಹಾಗೂ 2023-24ನೇ ಸಾಲಿನಲ್ಲಿ ಬಾಕಿ ಹಾಗೂ ಮುಂದುವರೆದ ಕಾಮಗಾರಿಗಳಿಗೆ 109.79 ಕೋಟಿ ರು. ಮೀಸಲಿಡಲಾಗಿದೆ. ಉಳಿದ 179 ಕೋಟಿ ರು. ಪ್ರಸಕ್ತ ವರ್ಷಕ್ಕೆ ನಿಗದಿ ಪಡಿಸಲಾಗಿದೆ.

3,993 ಫಲಾನುಭವಿಗೆ ಆಯ್ಕೆಗೆ ಅಂದಾಜು:

ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ 213 ಕೋಟಿ ರು. ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಈ ಪೈಕಿ 1,997 ಮಂದಿ ನಿವೇಶನ ಹೊಂದಿರುವವರಿಗೆ ಒಂಟಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು 106.58 ಕೋಟಿ ರು. ಒದಗಿಸುವುದು, ಉಳಿದಂತೆ 1,996 ಮಂದಿಗೆ ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಫ್ಲ್ಯಾಟ್‌ ಖರೀದಿಗೆ 106.52 ಕೋಟಿ ರು. ಸಹಾಯಧನ ನೀಡಲು ನಿರ್ಧರಿಸಲಾಗಿದೆ.

ಈಗಾಗಲೇ 2022-23 ಮತ್ತು 2023-24ನೇ ಸಾಲಿನ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಆಶ್ರಯ ಯೋಜನೆ ಸಮಿತಿ ಅಧ್ಯಕ್ಷರು ಸ್ಥಳೀಯ ಶಾಸಕರೂ ಆಗಿರುವುದರಿಂದ ಅವರಿಂದ ಅನುಮೋದನೆ ಪಡೆದು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಫಲಾನುಭವಿಗಳ ಪಟ್ಟಿ ಕಳುಹಿಸಲಾಗುವುದು.

ಆದರೆ, 2024-25ನೇ ಸಾಲಿನ ಫಲಾನುಭವಿಗಳ ಆಯ್ಕೆಗೆ ಅರ್ಜಿ ಪಡೆಯುವುದು, ಆಯ್ಕೆ ಮಾಡುವ ಅಧಿಕಾರವನ್ನು ಆಯಾ ನಗರ ಪಾಲಿಕೆಗಳಿಗೆ ನೀಡಲಾಗಿದೆ. ನಗರ ಪಾಲಿಕೆಯ ಕಲ್ಯಾಣ ವಿಭಾಗದ ಅಧಿಕಾರಿಗಳು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕ್ರಮ ವಹಿಸಬೇಕಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಯಾವ ವರ್ಗಕ್ಕೆ ಎಷ್ಟು ಮೀಸಲು? (ಕೋಟಿ ರು.)

ವರ್ಗಮೀಸಲಿಟ್ಟ ಮೊತ್ತ

ಎಸ್ಟಿ-ಎಸ್ಟಿ(ನೌಕರರು)198.00

ಎಸ್ಟಿ-ಎಸ್ಟಿ20.00

ಹಿಂದುಳಿದ-ಅಲ್ಪಸಂಖ್ಯಾತ15.88

ಅಂಗವಿಕಲ30.20

ಆರ್ಥಿಕ ಹಿಂದುಳಿದ23.71

ಒಟ್ಟು287.79 

ಪಾಲಿಕೆವಾರು ಒಂಟಿ ಮನೆ ಮತ್ತು ಫ್ಲಾಟ್‌ ಅಂದಾಜು ಫಲಾನುಭವಿ ಸಂಖ್ಯೆನಗರ ಪಾಲಿಕೆಒಂಟಿ ಮನೆರಾಜೀವ್‌ ಗಾಂಧಿ ವಸತಿ ಯೋಜನೆ(ಫ್ಲಾಟ್‌)

ಬೆಂ.ಕೇಂದ್ರ407407

ಬೆಂ.ಪೂರ್ವ663633

ಬೆಂ.ಪಶ್ಚಿಮ199199

ಬೆಂ.ಉತ್ತರ344343

ಬೆಂ.ದಕ್ಷಿಣ384384

ಒಟ್ಟು1,9971,996