ಸಾರಾಂಶ
ಪ್ರೀತಿಸಿ ಮದುವೆಯಾಗಿದ್ದ ಪತಿಯೊಬ್ಬ ರಸ್ತೆ ಮಧ್ಯದಲ್ಲಿ ತುಂಬು ಗರ್ಭಿಣಿಯಾಗಿದ್ದ ಪತ್ನಿಯನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆಯೊಂದು ಕಾಗವಾಡ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಕನ್ನಡಪ್ರಭ ವಾರ್ತೆ ಕಾಗವಾಡ
ಪ್ರೀತಿಸಿ ಮದುವೆಯಾಗಿದ್ದ ಪತಿಯೊಬ್ಬ ರಸ್ತೆ ಮಧ್ಯದಲ್ಲಿ ತುಂಬು ಗರ್ಭಿಣಿಯಾಗಿದ್ದ ಪತ್ನಿಯನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆಯೊಂದು ಕಾಗವಾಡ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.ಕಾಗವಾಡ ತಾಲೂಕಿನ ಉಗಾರ್ ಬುದ್ರುಕ್ ಗ್ರಾಮದ ವಕೀಲ ಪ್ರದೀಪ ಕಿರಣಗಿ ಎಂಬಾತನೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ನಡು ರಸ್ತೆಯಲ್ಲಿಯೇ ಕೊಂದು ಆಕ್ಷಿಡೆಂಟ್ ಡ್ರಾಮಾ ಮಾಡಿದಾತ. ಚೈತಾಲಿ ಕಿರಣಗಿ ಮೃತ ದುರ್ದೈವಿ. ತುಂಬು ಗರ್ಭಿಣಿಯಾಗಿದ್ದ ಹೆಂಡತಿಯನ್ನು ಕೊಲೆ ಮಾಡಿದ್ದಾನೆಂದು ಆರೋಪಗಳು ಕೇಳಿ ಬಂದಿದೆ.ಆಗಿದ್ದೇನು?:
ಸೆ.7 ಗ್ರಹಣದ ದಿನದಂದು ನೆರೆಯ ಶಿರಗುಪ್ಪಿ ಗ್ರಾಮಕ್ಕೆ ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ಬರುವುದಾಗಿ ಹೇಳಿ ಪತ್ನಿ ಕರೆದುಕೊಂಡು ಹೋಗಿದ್ದ ಆರೋಪಿ ಪ್ರದೀಪ, ಉಗಾರ್-ಶಿರಗುಪ್ಪಿ ರಸ್ತೆ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದ ಆಗ ಕಾರೊಂದು ವೇಗವಾಗಿ ಬಂದು ಅವಳಿಗೆ ಡಿಕ್ಕಿ ಹೊಡೆದಿತ್ತು. ತಲೆ ಗಂಭೀರವಾಗಿ ಗಾಯಗೊಂಡ ಚೈತ್ರಾಲಿಯನ್ನು ತಕ್ಷಣ ಮೀರಜ್ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ರಾತ್ರಿ 11.20ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.ಆದರೆ, ಈ ಕುರಿತು ಅಪಘಾತದ ನಾಟಕವಾಡಿ ಆತ ಪೊಲೀಸರ ಎದುರು ಕಣ್ಣೀರು ಸುರಿಸಿದ್ದ. ಚೈತ್ರಾಳ ತಂದೆ ಅಳಿಯನ ಮೇಲೆ ಅನುಮಾನಗೊಂಡು ಇದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಉದ್ದೇಶಪೂರ್ಕವಾಗಿಯೇ ಕೊಲೆ ಮಾಡಲಾಗಿದೆಂದು ಕಾಗವಾಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಪ್ರಾರರಂಭಿಸಿದ ಜಿಲ್ಲಾ ಪೊಲೀಸರು, ಕಾರು ಚಾಲಕ ಹಾಗೂ ಮೃತಳ ಗಂಡ ಪ್ರದೀಪ ಕಿರಣಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತನಿಖೆ ವೇಳೆ ಇದು ಅಪಘಾತವಲ್ಲ ಕೊಲೆ ಎಂದು ತಿಳಿದು ಬಂದಿದೆ.ಪತಿ ಪ್ರದೀಪ ಪತ್ನಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದು ರಾಡ್‌ನಿಂದ ಹೊಡೆದು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿರುವುದು ಬಹಿರಂಗವಾಗಿದೆ. ಈಗ ಪ್ರದೀಪ ಹಾಗೂ ಕಾರ್ ಚಾಲಕ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನನ್ವಯ ಜಿಲ್ಲಾ ಪೊಲೀಸ್ ಉಪಧೀಕ್ಷಕ ರಾಮನಗೌಡ ಬಸರಗಿ, ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸೈ ರಾಘವೇಂದ್ರ ಖೋತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.