ಸಾರಾಂಶ
ಹೊಸಕೋಟೆ: ಪ್ರತಿ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಗಿದ್ದು ಆ ಪ್ರತಿಭೆಗಳನ್ನು ಅನಾವರಣ ಮಾಡಲು ಶಾಲೆಗಳಲ್ಲಿ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕು ಎಂದು ಓಂ ಶ್ರೀ ಶಾಲೆ ಅಧ್ಯಕ್ಷ ಫ್ರೊ.ರಂಗಪ್ಪ ತಿಳಿಸಿದರು.
ಹೊಸಕೋಟೆ: ಪ್ರತಿ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಗಿದ್ದು ಆ ಪ್ರತಿಭೆಗಳನ್ನು ಅನಾವರಣ ಮಾಡಲು ಶಾಲೆಗಳಲ್ಲಿ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕು ಎಂದು ಓಂ ಶ್ರೀ ಶಾಲೆ ಅಧ್ಯಕ್ಷ ಫ್ರೊ.ರಂಗಪ್ಪ ತಿಳಿಸಿದರು.
ನಗರದ ಓಂ ಶ್ರೀ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಕಲಿಕೆಗೆ ಹಾಕುವಷ್ಟು ಒತ್ತಡ ಪಠ್ಯೇತರ ಚಟುವಟಿಕೆಗಳ ಕಲಿಕೆಗೆ ಪೋಷಕರು ಹಾಕುತ್ತಿಲ್ಲ. ಪ್ರತಿ ಮಗುವಿನಲ್ಲೂ ವಿದ್ಯೆ ಜೊತೆಗೆ ಕಲೆಯ ಅಭಿರುಚಿ ಇರುತ್ತದೆ. ಅಂತಹ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆ ಶಾಲೆಗಳಲ್ಲಿ ಒದಗಿಸಿಕೊಡಬೇಕು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು.ಶಾಲೆ ಕಾರ್ಯದರ್ಶಿ ಪ್ರೇಮಾ ರಂಗಪ್ಪ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಸಮಾಜದ ಸತ್ಪ್ರಜೆಗಳಾಗಿ ರೂಪುಗೊಳ್ಳುವಂತೆ ಮಾಡಬೇಕು ಎಂದರು.
ಓಂ ಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೇಮ ರಂಗಪ್ಪ, ಆಡಳಿತಾಧಿಕಾರಿ ರಘುನಂದನ್, ಪ್ರಾಂಶುಪಾಲೆ ಚಂದ್ರಮತಿ, ಮುಖ್ಯ ಶಿಕ್ಷಕಿ ಮಹಾಲಕ್ಷ್ಮೀ, ಪ್ರೀ ಪ್ರೈಮರಿ ಸಂಯೋಜಕಿ ಲಕ್ಷ್ಮೀ ಶೇಪುರ್, ತೀರ್ಪುಗಾರರಾದ ನಾಗಲಕ್ಷ್ಮೀ, ಎನ್‌ಡಿ ಪ್ರೇರಣಾ, ಸ್ವಾತಿ ಸಾಗರ್, ಉಷಾ, ಅಪೂರ್ವ ಗಾಯತ್ರಿ ಹಾಜರಿದ್ದರು.ಫೋಟೋ: 16 ಹೆಚ್‌ಎಸ್‌ಕೆ 1
ಹೊಸಕೋಟೆಯ ಓಂ ಶ್ರೀ ಶಾಲೆಯಲ್ಲಿ ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಅಧ್ಯಕ್ಷರಾದ ಪ್ರೊ. ರಂಗಪ್ಪ ಬಹುಮಾನ ವಿತರಿಸಿದರು.;Resize=(128,128))
;Resize=(128,128))