ಸಾರಾಂಶ
ಕೆಲ ಕಿಡಿಗೇಡಿಗಳು ಕುಡಿಯುವ ನೀರಿನ ಟ್ಯಾಂಕ್‌ಗೆ ಕ್ರಿಮಿನಾಶಕ ಬೆರೆಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿಚಿನ್ನದ ಗಣಿ ಪಟ್ಟಣ ಸಮೀಪದ ತವಗ ಗ್ರಾಮದಲ್ಲಿ ಜರುಗಿದೆ.
ಲಿಂಗಸೂಗುರು (ರಾಯಚೂರು) : ಕೆಲ ಕಿಡಿಗೇಡಿಗಳು ಕುಡಿಯುವ ನೀರಿನ ಟ್ಯಾಂಕ್‌ಗೆ ಕ್ರಿಮಿನಾಶಕ ಬೆರೆಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿಚಿನ್ನದ ಗಣಿ ಪಟ್ಟಣ ಸಮೀಪದ ತವಗ ಗ್ರಾಮದಲ್ಲಿ ಜರುಗಿದೆ.
ಪ್ರತಿನಿತ್ಯದಂತೆ ನೀರಿನ ಟ್ಯಾಂಕ್ ಮುಖಾಂತರ ಗ್ರಾಮಕ್ಕೆ ನೀರು ಸರಬರಾಜು ಮಾಡಲು ವಾಟರ್ ಮ್ಯಾನ್ ಆದಪ್ಪ ಟ್ಯಾಂಕ್ ಬಳಿಗೆ ಹೋಗಿದ್ದರು. ಈ ವೇಳೆ ಟ್ಯಾಂಕ್‌ನಲ್ಲಿ ದುರ್ವಾಸನೆ ಮತ್ತು ನೊರೆ ಬಂದಿದ್ದರಿಂದ ಅನುಮಾನಗೊಂಡು ನೀರು ಸರಬರಾಜು ಸ್ಥಗಿತಗೊಳಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರೊಂದಿಗೆ ಪರಿಶೀಲಿಸಿ ಟ್ಯಾಂಕ್ ಖಾಲಿ ಮಾಡಿ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಗ್ರಾಮಸ್ಥರಿಗೆ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ನೀರು ಸರಬರಾಜಾಗದ ಕಾರಣಕ್ಕೆ ಯಾವುದೇ ರೀತಿ ಅನಾಹುತ ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಹಟ್ಟಿ ಠಾಣೆಯಲ್ಲಿ ದೂರು ದಾಖಲಾಗಿದೆ.