ಕವಿತಾಳ ಸಮುದಾಯ ಆರೋಗ್ಯ ಕೇಂದ್ರದ ಮೇಲ್ಚಾವಣಿ ಸೋರಿಕೆಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮೇಲ್ಚಾವಣಿ ಸೋರುತ್ತಿರುವುದು ರೋಗಿಗಳಲ್ಲಿ ಆತಂಕ ಮೂಡಿಸಿದೆ. ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಿ 25 ವರ್ಷ ಕಳೆದಿದೆ. ೩೦ ಹಾಸಿಗೆ ಸಾಮರ್ಥ್ಯ ಹೊಂದಿದ್ದು, 4 ಓಪಿಡಿ ಕೊಠಡಿ, ನೇತ್ರ ತಜ್ಞರ ಕೊಠಡಿ, ಕ್ಷ ಕಿರಣ ಕೊಠಡಿ, ಪ್ರಯೋಗಾಲಯ, ಎನ್‌ಸಿಡಿ ಕೊಠಡಿ, ಐಸಿಟಿಸಿ ಕೊಠಡಿ, ಹೆರಿಗೆ ಕೊಠಡಿ, ಪಿಎನ್‌ಸಿ ಕೊಠಡಿ, ಶಸ್ತ್ರಚಿಕಿತ್ಸೆ ಕೊಠಡಿ ಗಳಿವೆ.