ಯಳವಾರೆ ಕೆರೆಗೆ ನೀರು ತುಂಬಿಸುವಂತೆ ರೈತರ ಪ್ರತಿಭಟನೆ

Nov 01 2025, 01:30 AM IST
ಗೀಜಿಹಳ್ಳಿ ಗ್ರಾಮ ಪಂಚಾಯಿತಿ ಯಳವಾರೆ ಗ್ರಾಮದ ಕೆರೆಗೆ ಹಾರನಹಳ್ಳಿ ಕೆರೆಯಿಂದ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಹಾರನಹಳ್ಲಿ ಕೆರೆಕೋಡಿಯಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಹಾರನಹಳ್ಳಿ ಕೆರೆ ತುಂಬಿರುವುದರಿಂದ ಹಾರನಹಳ್ಳಿ ಅಚ್ಚುಕಟ್ಟು ಪ್ರದೇಶದ ರಾಜಕಾಲುವೆ ಹುಳು ತುಂಬಿದ್ದು ತಕ್ಷಣ ನೀರಾವರಿ ಇಲಾಖೆ ಹುಳು ತೆಗೆಸಬೇಕು ಎಂದರು. ಸಣ್ಣ ನೀರಾವರಿ ಇಲಾಖೆ ದೂರದೃಷ್ಠಿ ಯೋಜನೆ ಸಿದ್ಧಪಡಿಸಿ ಎತ್ತಿನಹೊಳೆ ಮುಖಾಂತರ ಹಾಗೂ ನೈಜವಾಗಿ ಕೆರೆ ಕೋಡಿಬಿದ್ದ ಸಂಧರ್ಭದಲ್ಲಿ ಯಳವಾರೆ ಕೆರೆಗೆ ನೀರು ಕೊಟ್ಟು ರೈತರ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಮನವಿ ಮಾಡಿದರು.