ಭೀಮೆ ಅಬ್ಬರ: ಕೊಟ್ಟಿಗೆಗೆ ನೀರು; 40 ಹಸು ಸಾವು
Sep 29 2025, 01:02 AM ISTಜಿಲ್ಲೆಯಲ್ಲಿ ಭೀಮಾ, ಕಾಗಿಣಾ, ಕಮಲಾವತಿ ಸೇರಿ ಹಲವು ನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ಕಳೆದ 4 ದಿನದಿಂದಲೇ ಭಾರಿ ಮಹಾಪುರ ಬಂದು ಅಬ್ಬರಿಸುತ್ತಿರುವ ಭೀಮಾ ನದಿಯಲ್ಲಿ ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಳವಾಗಿದೆ. ಮಹಾರಾಷ್ಟ್ರ ನೀರು ಹರಿಸೋದು ಮುಂದುವರಿಸಿದೆ. ಭೀಮಾ ಉಕ್ಕೇರಿದ್ದರಿಂದ ಆಫ್ಜಲಪುರ, ಕಲಬುರಗಿ, ಜೇವರ್ಗಿ, ಚಿಂಚೋಳಿ, ಚಿತ್ತಾಪುರ, ಕಾಳಗಿಯಲ್ಲಿ ಆತಂಕ ಮುಂದುವರಿದಿದೆ.