ಕೋಡಿ ಬಿದ್ದು ಹರಿಯುತ್ತಿರುವ ಕೆರೆಗಳುಕುದೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಾಗಡಿ ತಾಲೂಕಿನ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಕುದೂರು ಮತ್ತು ತಿಪ್ಪಸಂದ್ರ ಹೋಬಳಿಯ ಕೆಂಚನಪುರ ಕೆರೆ, ಮಲ್ಲಪ್ಪನಹಳ್ಳಿ ಕೆರೆ, ತಿಪ್ಪಸಂದ್ರ ಕೆರೆಗಳು ಭರ್ತಿಯಾಗಿ ಕೋಡಿ ರಭಸವಾಗಿ ಹರಿಯುತ್ತಿವೆ.