ಜಾನಪದ ಕಲೆಗಳನ್ನು ಉಳಿಸಿ-ಬೆಳೆಸಿರಾಮನಗರ: ನಮ್ಮ ನಾಡಿನ ಜನಪದ ಪ್ರಕಾರಗಳನ್ನು ಪರಿಚಯಿಸಲು ಯುವ ಸೌರಭ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನಪದ ಕಲಾತಂಡಗಳಿಂದ, ಜನಪದ ಪ್ರಕಾರಗಳಿಂದ, ವಾದ್ಯಗಳಿಂದ ನಾಡಿನ ಸಂಸ್ಕೃತಿಯನ್ನು ಉಳಿಸಲು ಸರ್ಕಾರದ ವತಿಯಿಂದ ಯುವ ಸೌರಭದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜು ಗಾಣಕಲ್ ಹೇಳಿದರು.