ಸಾರಾಂಶ
- ಚಿನ್ನ ಹಗರಿಯ ನುಡಿತೇರು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ದೇವೇಂದ್ರಪ್ಪ - - -
ಕನ್ನಡಪ್ರಭ ವಾರ್ತೆ ಜಗಳೂರುತಾಲೂಕಿನಲ್ಲಿ ೩೦ ವರ್ಷಗಳ ನಂತರ ೧೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಕಲಾತಂಡಗಳ ಜೊತೆಯಲ್ಲಿ ಮೆರೆವಣಿಗೆ ಅರ್ಥಪೂರ್ಣವಾಗಿ ೨ ದಿನ ನಡೆದಿದ್ದು, ಜನವರಿಯಲ್ಲಿ ನಡೆದ ಸಮ್ಮೇಳನ ವಿಚಾರಗಳ “ಚಿನ್ನ ಹಗರಿಯ ನುಡಿತೇರು” ಪುಸ್ತಕ ಬಿಡುಗಡೆ ಶ್ಲಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಜಂಟಿ ಸಹಯೋಗದಲ್ಲಿ ಚಿನ್ನ ಹಗರಿಯ ನುಡಿತೇರು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನಗಳಲ್ಲಿ ಉತ್ತಮ ಪುಸ್ತಕಗಳನ್ನು ಖರೀದಿಸಿ ಓದಬೇಕು. ಜೀವನಕ್ಕೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಡಾ. ಎಂ.ಬಿ. ರಾಮಚಂದ್ರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನಲ್ಲಿ ಸಾಹಿತಿಗಳಿಗೇನು ಬರವಿಲ್ಲ. ಈ ನೆಲದ ಸತ್ಯಮೂಲ ಇದಕ್ಕೆ ಕಾರಣ ಎನ್ನಬಹುದು. ಈ ಸಮ್ಮೇಳನ ರಾಜ್ಯದಲ್ಲಿಯೇ ಹೆಸರು ಮಾಡಿದೆ ಎಂದರು.
ಸಾಹಿತಿ ಎನ್.ಟಿ. ಎರ್ರಿಸ್ವಾಮಿ ಸಂಪಾದಕರ ನುಡಿಗಳಾಡಿ, ಸಾಂಸ್ಕೃತಿಕವಾಗಿ ಜಗಳೂರು ಬದಲಾವಣೆ ಹಾಕುತ್ತಿದೆ. ೧೯೯೬ರಲ್ಲಿ ಸಮ್ಮೇಳನ ನಡೆದಿತ್ತು. ಪ್ರತಿ ಸಮ್ಮೇಳನ ನಡೆದ ಮೇಲೆ ನಾವು ಒಂದು ಕೃತಿ ಬಿಡುಗಡೆ ಮಾಡುತ್ತೇವೆ. ನಾನು ಪಕ್ಕದ ಹಾಲೇಹಳ್ಳಿ ತೊರೆ ಸಾಲಿನ ಹುಡುಗ. ಬುಡಕಟ್ಟು ಜನಾಂಗದಿಂದ ಬಂದವನು. ಈ ಪುಸ್ತಕದಲ್ಲಿ ಜಗಳೂರಿನ ಇತಿಹಾಸವನ್ನೇ ನೋಡಬಹುದು ಎಂದರು.ತಾಲೂಕು ಕ.ಸಾ.ಪ. ಅಧ್ಯಕ್ಷೆ ಸುಜಾತಮ್ಮ ರಾಜು, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಜಿ.ಎಸ್. ಚಿದಾನಂದ, ಪ್ರಾಂಶುಪಾಲರಾದ ಡಾ.ರಂಗಪ್ಪ ಆರ್., ಡಾ.ದಾಪೀರ್ ನವಿಲೇಹಾಳ್, ರೇವಣ ಸಿದ್ದಪ್ಪ ಅಂಗಡಿ, ಪ್ರಕಾಶ್, ದಿಳ್ಳಪ್ಪ ನಾಗಲಿಂಗಪ್ಪ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
- - -(ಟಾಪ್ ಕೋಟ್) ಸಾಹಿತ್ಯವನ್ನು ಬಿತ್ತಿ ಬೆಳೆಯಬಹುದು ಎನ್ನುವುದನ್ನು ನಾವು ಜಗಳೂರಿನಲ್ಲಿ ನೋಡಿದ್ದೇವೆ. ಶಾಸಕರು ಸಾಹಿತ್ಯದ ಬಗ್ಗೆ ಹಲವಾರು ವಿಶೇಷತೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಜೊತೆಗೆ ಶಿಕ್ಷಣಪ್ರೇಮಿಯೂ ಹೌದು. ಕಲ್ಲೇದೇವರಪುರ ಗ್ರಾಮದಲ್ಲಿ ದೇವಸ್ಥಾನ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
- ಬಿ.ವಾಮದೇವಪ್ಪ ತೊಗಲೇರಿ, ಜಿಲ್ಲಾಧ್ಯಕ್ಷ, ಕಸಾಪ.- - -
-೧೫ಜೆಎಲ್ಆರ್೦೧:ಜಗಳೂರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಚಿನ್ನ ಹಗರಿಯ ನುಡಿತೇರು ಕೃತಿಯನ್ನು ಶಾಸಕ ಬಿ.ದೇವೇಂದ್ರಪ್ಪ ಬಿಡುಗಡೆಗೊಳಿಸಿದರು. ಡಾ. ಎಂ.ಬಿ. ರಾಮಚಂದ್ರಪ್ಪ, ಬಿ.ವಾಮದೇವಪ್ಪ, ಎನ್.ಟಿ. ಎರ್ರಿಸ್ವಾಮಿ ಇತರರು ಇದ್ದರು.