ಸಾರಾಂಶ
10 ವರ್ಷಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನೌಷಧ, ಆಯುಷ್ಮಾನ್ ಭಾರತ, ಹರ್‌ಘರ್ ಸೌರ ವಿದ್ಯುತ್ ಹೀಗೆ ಅನೇಕ ಯೋಜನೆಗಳನ್ನು ಕೊಟ್ಟು ಭಾರತವನ್ನು ಸುಭದ್ರ ಮಾಡಿದ್ದಾರೆ
ಗದಗ: ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವಿಕಸಿತ ಭಾರತ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಸಂಕಲ್ಪ ಪತ್ರ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮ ನಗರದ ಪ್ರೋಬೊಸ್ ಕ್ಲಬ್‌ನಲ್ಲಿ ನಡೆಯಿತು. ಈ ವೇಳೆ ಎಲ್ಲ ಹಿರಿಯ ನಾಗರಿಕರಿಂದ ಸಲಹೆ ಸಂಗ್ರಹಿಸಲಾಯಿತು..
ಈ ವೇಳೆ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಶಶಿಧರ ದಿಂಡೂರ ಮಾತನಾಡಿ, 2024ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಗೆ ಸಂಕಲ್ಪ ಪತ್ರ ಅಭಿಯಾನದ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ತಮ್ಮ ಅಭಿಪ್ರಾಯಗಳನ್ನು ನಮೋ ಆ್ಯಪ್ ಮೂಲಕ ಹಾಗೂ 9090902024 ನಂಬರ್‌ಗೆ ಮಿಸ್ ಕಾಲ್ ಮಾಡಿ ನೀಡಬಹುದು, ಸಂಗ್ರಹ ಪೆಟ್ಟಿಗೆಯಲ್ಲಿ ಬರೆದು ಅಭಿಪ್ರಾಯ ತಿಳಿಸಬಹುದು 10 ವರ್ಷಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನೌಷಧ, ಆಯುಷ್ಮಾನ್ ಭಾರತ, ಹರ್‌ಘರ್ ಸೌರ ವಿದ್ಯುತ್ ಹೀಗೆ ಅನೇಕ ಯೋಜನೆಗಳನ್ನು ಕೊಟ್ಟು ಭಾರತವನ್ನು ಸುಭದ್ರ ಮಾಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಕೋಷ್ಠಗಳ ಸಹ-ಸಂಯೋಜಕ ರಮೇಶ ಸಜ್ಜಗಾರ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಶಿವವ್ವ ಕೆ. ಕುರುಡಗಿ, ಪ್ರೋಬೊಸ್ ಕ್ಲಬ್ ಅಧ್ಯಕ್ಷ ತೊಟಗೇರ, ಅಶೋಕ ಕೊಡಗಲಿ, ಬಿ.ಬಿ. ಗೌಡ್ರ, ಬಿ.ಎಂ. ಬಿಳೆಯಲಿ, ಆರ್.ಡಿ. ಕಪ್ಲಿ, ಸುರೇಕಾ ಪಿಳ್ಳಿ ಮುಂತಾದವರು.