ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸಂಸ್ಕೃತ ಭಾಷೆಯ ಸುಮಾರು 60ಕ್ಕೂ ಹೆಚ್ಚು ಪದಗಳು ಪ್ರಸ್ತುತ ಕನ್ನಡ ಭಾಷೆಯಲ್ಲಿ ಇರುವುದು ವಿಶೇಷ ಹೆಮ್ಮೆ ಎನಿಸಿದೆ ಎಂದು ಅಧ್ಯಕ್ಷ ಹೆಚ್.ಎನ್. ರಾಮಕೃಷ್ಣ ತಿಳಿಸಿದರು.ತಾಲೂಕಿನ ದಾರಿನಾಯಕನಪಾಳ್ಯ ಗ್ರಾಮದ ಸರ್ಕಾರಿ ಸಂಸ್ಖೃತ ಪಾಠಶಾಲೆಯ ಸಂಸ್ಕೃತ ವಿಭಾಗ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಚಾಮರಾಜಪೇಟೆ, ಬೆಂಗಳೂರು ಇವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಸ್ಕೃತ ಪ್ರಚಾರ ಪರಿಷದ್ ಟ್ರಸ್ಟ್(ರಿ) ವತಿಯಿಂದ ಆಯೋಜಿಸಿದ್ದ ಅಸ್ಮಾಕಂ ಸಂಸ್ಕೃತಮ್ ಕಾರ್ಮಕ್ರಮವನ್ನು ಉದ್ಘಾಟಿಸಿ ನಂತರ ‘ಅಸ್ಮಾಕಂ ಸಂಸ್ಕೃತಮ್’ ಎಂಬ ಸರಣಿ ಸಂಸ್ಕೃತೋತ್ಸವದ ಮುಖ್ಯವಕ್ತಾರರಾಗಿ ಅವರು ಮಾತನಾಡಿದರು.
ಪುರಾತನ ಭಾಷೆ ಸಂಸ್ಕೃತಸಂಸ್ಕೃತವು ಜಗತ್ತಿನ ಅತಿಪುರಾತನವಾದ ಭಾಷೆಯಾಗಿದೆ, ಅತ್ಯಂತ ದೊಡ್ಡದಾದ ಜ್ಞಾನಭಂಡಾರವೇ ಈ ಭಾಷೆಯಲ್ಲಿದೆ. ಆದ್ದರಿಂದ ಇಂದು ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೆಲ್ಲವೂ ಸಂಸ್ಕೃತ ವಿಭಾಗವನ್ನು ಪ್ರಾರಂಭಿಸುತ್ತಿವೆ. ಈ ಮೂಲಕ ಭಾರತೀಯ ಜ್ಞಾನ-ವಿಜ್ಞಾನ ಪರಂಪರೆಯನ್ನು ಅಭ್ಯಸಿಸುತ್ತಿವೆ. ಒಟ್ಟಿನಲ್ಲಿ ಸಂಸ್ಕೃತ ಇಂದು ಜಾಗತಿಕವಾದ, ಜಗನ್ಮಾನ್ಯವಾದ ಭಾಷೆಯಾಗಿದೆ ವಿಶೇಷ ಅರ್ಥವನ್ನು ನೀಡುವ ಸಂಸ್ಕೃತ ಭಾಷೆಯ ಕಲಿಕೆಯು ಎಲ್ಲಾ ಮಕ್ಕಳಿಗೂ ಅನಿವಾರ್ಯವಾಗಬೇಕಾಗಿದೆ ಈ ನಿಟ್ಟಿನಲ್ಲಿ ಸಂಸ್ಕೃತ ಭಾಷೆಯ ಪರಿಚಯವನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದು ಸಲಹೆ ನೀಡಿದರು.
ಪ್ರಪ್ರಥಮವಾಗಿ ದಾರಿನಾಯಕನಪಾಳ್ಯದ ಸಂಸ್ಕೃತ ಪಾಠಶಾಲೆಯ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ಸಂಸ್ಕೃತದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾಥಾ ಒರಟು ದಾರಿಉದ್ದಕ್ಕೂ ಸಂಸ್ಕೃತ ಪರವಾದ ಘೋಷಣೆಗಳನ್ನು ಕೂಗುತ್ತಾ ಕೆ.ಪಿ.ಎಸ್. ಶಾಲೆ ಆವರಣಕ್ಕೆ ಬಂದು ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.ಸಂಸ್ಕೃತ ವೈಜ್ಞಾನಿಕ ಭಾಷೆಕರ್ನಾಟಕ ಪಬ್ಲಿಕ್ಕೆ ಶಾಲೆಯ ಸಹ ಶಿಕ್ಷಕಿಯಾದ ಶ್ರೀ ಲಕ್ಷ್ಮಿಮಾತನಾಡಿ, ಭಾರತದ ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ದತಿಯಲ್ಲಿ ಮಕ್ಕಳಿಗೆ ಸಂಸ್ಕೃತ ಭಾಷೆಯ ಪಾಠವನ್ನು ಕಲಿಸಲಾಗುತ್ತಿತ್ತು. ಆಗಿನ ಸಂದರ್ಭದಲ್ಲಿ ಸಂಸ್ಕೃತ ಭಾಷೆಯನ್ನು ಸಂವಹನ ಭಾಷೆಯಾಗಿ ಬಳಕೆ ಮಾಡುತ್ತಿದ್ದರಿಂದ ಹೆಚ್ಚು ಮನ್ನಣೆಯನ್ನು ಗಳಿಸಿತು. ಇಂದಿಗೂ ಸಹ ಸಂಸ್ಕೃತಿ ಭಾಷೆಯು ವೈಜ್ಞಾನಿಕ ಭಾಷೆಯ ಸ್ಥಾನವನ್ನುಪಡೆದಿದ್ದು ದೇಶದ ಹಿರಿಮೆ-ಗರಿಮೆಯನ್ನು ಎತ್ತಿಹಿಡಿದ ಸಂಸ್ಕೃತ ಬಾಷೆಯು ನಮ್ಮ ಭಾರತದ ಹೆಮ್ಮೆಯ ಭಾಷೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಗವದ್ಗೀತೆ ಪಠಣ,ಸಂಸ್ಕೃತ ಗೀತೆ ಗಾಯನ, ನೃತ್ಯ ಮತ್ತು ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೆ.ಪಿ.ಎಸ್.ಶಾಲೆಯ ಸಹಶಿಕ್ಷಕರಾದ ವಿ.ವಿ.ರಮೇಶ್, ಸಂಸ್ಕೃತ ಪಾಠಶಾಲೆಯ ಸಹ ಶಿಕ್ಷಕಿಯಾದ ಸಿ.ಎಲ್.ಉಮಾದೇವಮ್ಮ,ರೋಹಿಣಿ,ಅನುಜಾ,ಮತ್ತು ಎಲ್ಲಾಶಿಕ್ಷಕ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.