ಗ್ರಾಮೀಣ ಕ್ರೀಡೆ ಉಳಿಸಿ, ಬೆಳೆಸಿ

| Published : Dec 22 2024, 01:33 AM IST

ಸಾರಾಂಶ

ಗ್ರಾಮೀಣ ಭಾಗದ ಕಬಡ್ಡಿ ಅಂತಹ ಅನೇಕ ಕ್ರೀಡೆಗಳು ಮರೆಯಾಗುತ್ತಿವೆ. ಕೇವಲ ಸ್ಪರ್ಧಾಕೂಟಗಳಲ್ಲಿ ಮಾತ್ರ ಕಾಣುವಂತಾಗಿದೆ. ಇವು ಕೇವಲ ಕ್ರೀಡೆಗಳಷ್ಟೆ ಅಲ್ಲ. ಇವುಗಳಲ್ಲಿ ಗ್ರಾಮೀಣ ಭಾಗದ ಜನರ ಬದುಕಿನ ಅರ್ಥ ಅಡಗಿದೆ. ಈ ಹಿಂದೆ ನಮ್ಮ ಹಿರಿಯರು ಊರಿಗೆ ಬೇಕಿರುವ ಕೆರೆ ಕುಂಟೆ ಕಾಲುವೆ ಸಮುದಾಯ ಭವನ ಛಾವಡಿಯನ್ನು ತಾವೇ ನಿರ್ಮಿಸಿಕೊಳ್ಳುತ್ತಿದ್ದರು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಆಧುನಿಕತೆಯ ಭರಾಟೆಯಿಂದ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಆದ್ದರಿಂದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ತಿಳಿಸಿದರು.ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಳ್ಳೂರಾಂಬ ದೇವಿಯ ಬ್ರಹ್ಮರಥೋತ್ಸವ ಅಂಗವಾಗಿ ಶ್ರೀಬಾಲಾಜಿ ಸೇವಾ ಟ್ರಸ್ಟಿನಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ವಿಜೇತ ತಂಡಕ್ಕೆ ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿ ಮಾತನಾಡಿದರು.ಮರೆಯಾಗುತ್ತಿರುವ ಕ್ರೀಡೆ

ಗ್ರಾಮೀಣ ಭಾಗದ ಕಬಡ್ಡಿ ಅಂತಹ ಅನೇಕ ಕ್ರೀಡೆಗಳು ಮರೆಯಾಗುತ್ತಿವೆ. ಕೇವಲ ಸ್ಪರ್ಧಾಕೂಟಗಳಲ್ಲಿ ಮಾತ್ರ ಕಾಣುವಂತಾಗಿದೆ. ಇವು ಕೇವಲ ಕ್ರೀಡೆಗಳಷ್ಟೆ ಅಲ್ಲ. ಇವುಗಳಲ್ಲಿ ಗ್ರಾಮೀಣ ಭಾಗದ ಜನರ ಬದುಕಿನ ಅರ್ಥ ಅಡಗಿದೆ. ಈ ಹಿಂದೆ ನಮ್ಮ ಹಿರಿಯರು ಊರಿಗೆ ಬೇಕಿರುವ ಕೆರೆ ಕುಂಟೆ ಕಾಲುವೆ ಸಮುದಾಯ ಭವನ ಛಾವಡಿಯನ್ನು ತಾವೇ ನಿರ್ಮಿಸಿಕೊಳ್ಳುತ್ತಿದ್ದರು. ಅಲ್ಲಿ ಪೌರಾಣಿಕ ನಾಟಕ, ಕಬಡ್ಡಿಯಂತ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿದ್ದರು ಎಂದರು.

ಬಹುಮಾನ ವಿತರಣೆ

ಪ್ರಥಮ ಬಹುಮಾನ ಚಂದು ಬಾಯ್ಸ್‌ ಅವರಿಗೆ 30 ಸಾವಿರ ನಗದು, ಟ್ರೋಫಿ, ದ್ವಿತೀಯ ಬಹುಮಾನ ಯಂಗ್ ಸ್ಟಾರ್ಸ್-20 ಸಾವಿರ ನಗದು ಹಾಗೂ ಟ್ರೋಪಿ, ತೃತೀಯ ಸ್ಥಾನ ಪಡೆದ ಜೈ ಭೀಮ್ ತಂಡಕ್ಕೆ 10 ಸಾವಿರ ನಗದು, ಟ್ರೋಫಿ ಹಾಗೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ದೇವರಮಳ್ಳೂರು ಯುವಕರ ಕಬಡ್ಡಿ ತಂಡಕ್ಕೆ 5 ಸಾವಿರ ರು. ನಗದು ಮತ್ತು ಟ್ರೋಫಿಯನ್ನು ನೀಡಲಾಯಿತು.

ಈ ವೇಳೆ ಬಾಲಾಜಿ ಸೇವಾ ಟ್ರಸ್ಟ್‌ ಸೀಕಲ್ ಆನಂದಗೌಡ, ಪಲಿಚೇರ್ಲು ಸೋಮಶೇಕರ್‌, ತಲದುಮ್ಮನಹಳ್ಳಿ ಮಧು, ಸಂಜೀವಪ್ಪ, ಚಾತುರ್ಯ, ಮಳ್ಳೂರಾಂಭ ದೇವಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಕೀಲ ಮುನಿರಾಜುಗೌಡ, ಸುಬ್ರಮಣ್ಯಪ್ಪ, ರೆಡ್ಡಿಸ್ವಾಮಿ, ಚನ್ನಕೃಷ್ಣ ಇನ್ನಿತರರು ಹಾಜರಿದ್ದರು.