ಲಿಂಗಾಯತ-ವೀರಶೈವ ಧರ್ಮಕ್ಕೆ ಷಟಸ್ಥಲವೇ ಮೂಲ ಆಧಾರ

| Published : Jan 03 2025, 12:32 AM IST

ಸಾರಾಂಶ

ಲಿಂಗಾಯತ ಮತ್ತು ವೀರಶೈವ ಧರ್ಮ ಎರಡು ಒಂದೇಯಾಗಿದ್ದು ಷಟಸ್ಥಲವೇ ಮೂಲ ಆಧಾರವಾಗಿದೆ ಎಂದು ಚರಂತಿಮಠದ ಪ್ರಭುಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲಿಂಗಾಯತ ಮತ್ತು ವೀರಶೈವ ಧರ್ಮ ಎರಡು ಒಂದೇಯಾಗಿದ್ದು ಷಟಸ್ಥಲವೇ ಮೂಲ ಆಧಾರವಾಗಿದೆ ಎಂದು ಚರಂತಿಮಠದ ಪ್ರಭುಮಹಾಸ್ವಾಮೀಜಿ ಹೇಳಿದರು.

ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ, ಸಮಾನಮನಸ್ಕ ಹಿರಿಯ ನಾಗರಿಕ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌, ಜಿಲ್ಲಾಘಟಕ ಹಾಗೂ ವರದಾನೇಶ್ವರಿ ಮಹಿಳಾ ಮಂಡಳ ಸಹಯೋದಲ್ಲಿ ವಿದ್ಯಾಗಿರಿ ಸಾಯಿ ಮಂದಿರ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಮಂಗಲ ಕಾರ್ಯಾಲದಲ್ಲಿ ನಡೆದ 32ನೇ ಮಾಸಿಕ ಶರಣ ಚಿಂತನ ಗೋಷ್ಠಿಯಲ್ಲಿ ದಿವ್ಯ ಸಾನ್ನಿಧ್ಯವಹಿಸಿ ವಿರಶೈವ-ಲಿಂಗಾಯತ ಧರ್ಮ: ಸೂತಕಗಳು ಎಂಬ ವಿಷಯ ಕುರಿತು ಮಾತನಾಡಿದರು.

ಲಿಂಗಾಯತ ವೀರಶೈವ ಬೇರೆ ಬೇರೆ ಅಂಥ ಹೇಳಿಕೊಳ್ಳುತ್ತೇವೆ. ಆದರೆ ಏರಡು ಒಂದೇಯಾಗಿದ್ದು ಇವೆರಡಕ್ಕೂ ಮೂಲ ಆಧಾರವೇ ಷಟಸ್ಥಲ ವಾಗಿದೆ. ವಿರಕ್ತಸ್ವಾಮಿಗಳು ಹಾಗೂ ಪಟ್ಟದಸ್ವಾಮಿಗಳಿಗೂ ಎಲ್ಲರಿಗೂ ಭಕ್ತ ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಹಾಗೂ ಐಕ್ಯ ಈ ಸ್ಥಳಗಳೆ ಮೂಲ ಆಧಾರಗಳಾಗಿದ್ದು, ಧರ್ಮದ ತಳಹದಿಯಾಗಿವೆ. ಇವುಗಳನ್ನು ಹಿಡಿಕೊಂಡು ಮುಂದೆ ಬರತಕ್ಕಂತಹ ಪೂಜ್ಯ ಪೂಜಕ ವಸ್ತುಗಳಾದ ಗುರು, ಲಿಂಗ, ಜಂಗಮ, ಪಾದೋಧಕ ಹಾಗೂ ಪ್ರಸಾದಗಳನ್ನು ಹಿಡಿದುಕೊಂಡು ನಮ್ಮವರು ಧರ್ಮದ ಆಚರಣೆಯನ್ನು ಬಹಳ ವ್ಯವಸ್ಥಿತವಾಗಿ ಮಾಡಿದರು. ಯಾಕೆಂದರೆ ಬಹಳಷ್ಟು ಸೂತಕಳಿಂದ ತೊಂದರೆ ಬಂದ ಪರಿಣಾಮ ಅದರಿಂದ ಹೊರಬರತಕ್ಕಂತ ವ್ಯವಸ್ಥೆಯನ್ನು ಈ ವೀರಶೈವ ಲಿಂಗಾಯತ ಧರ್ಮ ಮಾಡಿದೆ ಎಂದರು.

ಪಂಚ ಸೂತಕಗಳನ್ನು ನಮ್ಮವರು ತೆಗೆದುಹಾಕಿ ಇಷ್ಟಲಿಂಗ ಪೂಜೆ ಮುಖಾಂತರ ಏಕದೇವೋಪಾಸನೆಯನ್ನು ತಂದರು. ಮಂತ್ರ ಸಂಬಂಧ ಮೂಲಕ ಲಿಂಗದೀಕ್ಷೆ ಕೊಟ್ಟರು. ಇಲ್ಲಿ ನೀ ದೇವ ನಿನ್ನ ಅಂಗ ದೇವ ಅಂದರು, ಅಲ್ಲದೆ ಆ ಲಿಂಗ ನಿನ್ನ ಅಂಗಕ್ಕೆ ಆಲಿಂಗವಾಗಲಿಕ್ಕೆ ನೀ ಲಿಂಗ ನಿನ್ನ ಮೈಲಿಂಗ ಅಂಥ ಹೇಳಿದರು. ಇಲ್ಲಿ ಸೂತಕ ಹೋಗುತ್ತೆ ಸೂತಕನೆ ಬರೊದಿಲ್ಲಾ, ಜನನ ಸೂತಕ, ರಜೊಸೂತಕ, ಮರಣ ಸೂತಕ, ಉಚ್ಚಿಷ್ಟ ಸೂತಕ, ಪ್ರೇತ ಸೂತಕ ಇವೆಲ್ಲ ಸೂತಕಗಳು ನಮಗೆ ಇಲ್ಲಾ, ಇವುಗಳನ್ನು ಪ್ರಶ್ನೇ ಮಾಡದಂತೆ ನಮ್ಮ ಶರಣರು ವ್ಯವಸ್ಥಿತವಾಗಿ ಸರಳ ಆಚರಣೆಯನ್ನು ತಂದರು ಎಂದು ಅಭಿಪ್ರಾಯಪಟ್ಟರು.

ಮನುಷ್ಯನಿಗೆ ದೈವತ್ವ ಬಂದಮೇಲೆ ಅವನಿಗೆ ಸೂತಕದ ಅವಶ್ಯಕತೆ ಇಲ್ಲಾ. ಧರ್ಮಗಳಲ್ಲಿ ದೀಕ್ಷೆಗಳು ಇವು ಮಂತ್ರ ಸಂಬಂಧ ಮೂಲಕ ಜನರೆನ್ನೆ ದೇವರನ್ನಾಗಿ ಮಾಡುವ ವ್ಯವಸ್ಥೆ ಇರುವುದರಿಂದ ದೇವರಿಗೆ ಸೂತಕವಿಲ್ಲಾ. ಇವೆಲ್ಲವೂ ಷಟಸ್ಥಲ ಭಾಗವಾಗಿ ಇವೆ. ಮುಂದೆ ಆಚರಣೆಗಳು ಬರುತ್ತವೆ, ಧರ್ಮವನ್ನು ರಕ್ಷಣೆ ಮಾಡಲು ಬೇಕಾದ ಸರಳ ಆಚರಣೆಗಳನ್ನು ವೀರಶೈವ ಲಿಂಗಾಯತ ಧರ್ಮಗಳು ಜಾರಿಗೆ ತಂದಿವೆ. ನಾವೂ ಇಂದು ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡು ಆಚರಣೆಯಲ್ಲಿ ತರಬೇಕಾಗಿದೆ. ಎಲ್ಲರೂ ಸರಳ ಧಾರ್ಮಿಕ ಆಚರಣೆಗಳನ್ನು ಅನುಸರಿಸಿರಿ ಎಂದರು.

ಇನ್ನೊರ್ವ ಶ್ರೀಗಳಾದ ಟೀಕೀನಮಠದ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯ ವಹಿಸಿದ್ದರು. ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಾಮದ ಅಧ್ಯಕ್ಷ ಜಿ.ಎನ್.ಪಾಟೀಲ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಾ.ಸಿ.ಎಸ್.ಪಾಟೀಲ, ಜಿಲ್ಲಾಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎ.ಎಸ್.ಪಾವಟೆ, ವರದಾನೇಶ್ವರಿ ಮಹಿಳಾ ಮಂಡಳ ಅಧ್ಯಕ್ಷೆ ಪಾರ್ವತಮ್ಮ ಬಳೂಲಮಠ, ಶ್ರೀಶೈಲ ಕರಿಶಂಕರಿ ಸೇರಿ ಅನೇಕರಿದ್ದರು. ಬಸಯ್ಯ ಮಠಪತಿಯವರು ವಚನ ಗಾಯನ ಮಾಡಿದರು, ಎಸ್.ವಿ.ಚೌಡಾಪುರ ನಿರೂಪಿಸಿ, ಮಹಾಬಳೇಶ ಗುಡುಗುಂಟಿ ಸ್ವಾಗತಿಸಿ, ಬಸವರಾಜ ತಿಪಶೆಟ್ಟಿ ವಂದಿಸಿದರು.