ಸಾರಾಂಶ
ಅಂಧತ್ವಕ್ಕೆ ಕಾರಣವಾಗುವ ಗ್ಲುಕೋಮಾ ಕುರಿತು ಜಾಗೃತಿ ಮೂಡಿಸಲು ನಾರಾಯಣ ನೇತ್ರಾಲಯದಿಂದ ರಾಮಗೊಂಡನಹಳ್ಳಿಯ ಜಾರಕಬಂಡೆ ಮೀಸಲು ಅರಣ್ಯದಲ್ಲಿ ‘ಸೈಟ್ ಸೇವರ್ ರನ್’ ನಡೆಯಿತು.
ಬೆಂಗಳೂರು : ಅಂಧತ್ವಕ್ಕೆ ಕಾರಣವಾಗುವ ಗ್ಲುಕೋಮಾ ಕುರಿತು ಜಾಗೃತಿ ಮೂಡಿಸಲು ನಾರಾಯಣ ನೇತ್ರಾಲಯದಿಂದ ರಾಮಗೊಂಡನಹಳ್ಳಿಯ ಜಾರಕಬಂಡೆ ಮೀಸಲು ಅರಣ್ಯದಲ್ಲಿ ‘ಸೈಟ್ ಸೇವರ್ ರನ್’ ನಡೆಯಿತು.
ಸ್ಪರ್ಧೆಗೆ ಚಾಲನೆ ನೀಡಿದ ಸೌತ್ ಏಷ್ಯನ್ ಚಾಂಪಿಯನ್ ಅರ್ಜುನ್ ದೇವಯ್ಯ, ‘ಗ್ಲುಕೋಮಾ ತಡೆಗಟ್ಟಲು ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ, ಅದರಲ್ಲೂ ಗ್ಲುಕೋಮಾ ಅಪಾಯದ ಸಾಧ್ಯತೆ ಇರುವವರು ತಪಾಸಣೆ ಮಾಡಿಸಿಕೊಳ್ಳಬೇಕು. ಶೀಘ್ರ ಪತ್ತೆ ಹಾಗೂ ರೋಗನಿರ್ಣಯದಿಂದ ಅಂಧತ್ವ ತಡೆಗಟ್ಟಬಹುದು’ ಎಂದರು.
ನಾರಾಯಣ ನೇತ್ರಾಲಯದ ಸಿಇಒ ಗ್ರೂಪ್ ಕ್ಯಾಪ್ಟನ್ ಎಸ್. ಕೆ. ಮಿತ್ಥಲ್ ವಿಎಸ್ಎಮ್ ಮಾತನಾಡಿ, ನಾರಾಯಣ ನೇತ್ರಾಲಯದಿಂದ ಜನರ ದೃಷ್ಟಿ ಉಳಿಸುವ ಜತೆಗೆ ಸಸಿ ನೆಡುವ ಮೂಲಕ ಪರಿಸರ ಉಳಿಸುವ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು.
5 ಕಿ.ಮೀ ಮತ್ತು 10 ಕಿ.ಮೀ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚಿನವರು ಪಾಲ್ಗೊಂಡು ಓಡಿದರು. ಮೊದಲ 3 ಸ್ಥಾನ ಗಳಿಸಿದವರಿಗೆ ಟ್ರೋಫಿ, ಪ್ರಮಾಣಪತ್ರ ನೀಡಲಾಯಿತು. ಈ ವೇಳೆ ಸ್ಪರ್ಧಿಗಳು ಸಸಿ ನೆಟ್ಟರು.