ಟೊಮೆಟೊ ₹100, ಬೀನ್ಸ್‌ ₹200 - ತರಕಾರಿ ಬೆಲೆ ಏರಿಕೆಗೆ ಜನ ಕಂಗಾಲು

| Published : Jun 19 2024, 01:00 AM IST / Updated: Jun 20 2024, 06:35 AM IST

ಟೊಮೆಟೊ ₹100, ಬೀನ್ಸ್‌ ₹200 - ತರಕಾರಿ ಬೆಲೆ ಏರಿಕೆಗೆ ಜನ ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಮಾರುಕಟ್ಟೆಯಲ್ಲಿ ತರಕಾರಿ ದರ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ರೈತರ ಹೊಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ದಾಸ್ತಾನು ಬಂದಿಲ್ಲ, ಇದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ.

ಬೆಂಗಳೂರು  :   ಮಾರುಕಟ್ಟೆಯಲ್ಲಿ ತರಕಾರಿ ದರ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ರೈತರ ಹೊಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ದಾಸ್ತಾನು ಬಂದಿಲ್ಲ, ಇದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ.

ಕಳೆದ ವರ್ಷದ ಬರ ಈಗಲೂ ಕಾಡುತ್ತಲೇ ಇದೆ. ಇದರಿಂದ ತರಕಾರಿ (Vegetable), ಸೊಪ್ಪು, ಹಣ್ಣುಹಂಪಲು ಬೆಲೆ (prices hike) ಗಗನಕ್ಕೆ ಏರಿದೆ. ತರಕಾರಿ ದರ ತೀರಾ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.ಪಟ್ಟಣದ ತರಕಾರಿ ವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಶುದ್ದ ಸಿಗುತ್ತದೆ ಎಂದು ಹೆಚ್ಚು ಗ್ರಾಹಕರು ಬರುತ್ತಾರೆ.ಪ್ರತಿ ಸೋಮವಾರ ತರಕಾರಿ ಸಂತೆ ನಡೆಯುತ್ತದೆ. ಆದರೆ ಈಗ ತರಕಾರಿ ದರ ಕೇಳಿದರೆ ಇಷ್ಟಕ್ಕೆ ಅಷ್ಟೊಂದಾ ಎನ್ನುವಂತಾಗಿದೆ. ಕೆಂಪು‌ ಸುಂದರಿ ಟೊಮ್ಯಾಟೊ ಬೆಲೆ‌ ನೂರಕ್ಕೆ ಏರಿದೆ. ಕೇವಲ ಹತ್ತು ರೂಗೆ ಸಿಗುತ್ತಿದ್ದ ಕೋತಂಬರಿ ಸೊಪ್ಪು ಒಂದು ಕಟ್ ಈಗ 30 ರಿಂದ 40 ರು. ಆಗಿದ್ದು ಅಚ್ಚರಿ ಮೂಡಿಸಿದೆ.

ಯಾವ ತರಕಾರಿಗೆ ಎಷ್ಟು ಬೆಲೆ: ಇನ್ನು ಬದನೆಕಾಯಿ 80, ಚವಳಿಕಾಯಿ 80, ಸೌತೆಕಾಯಿ 100, ಹಸಿಮೆಣಸಿನಕಾಯಿ120 ಹೀರೆ ಕಾಯಿ 120 ರೂಪಾಯಿ ಎಲ್ಲವೂ ಕೆಜಿಗೆ 100 ರಿಂದ 120 ರೂ ಗೆ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.ವೈದ್ಯರು ಉತ್ತಮ ಆರೋಗ್ಯಕ್ಕೆ ತರಕಾರಿ ಹಣ್ಣು ತಿನ್ನಿ ಅಂತಾರೆ ಆದರೆ ಇಷ್ಟೊಂದು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡೋದು ಹೇಗೆ ಎಲ್ಲ ತುಟ್ಟಿಯಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.ಬಹುತೇಕ ಎಲ್ಲ ತರಕಾರಿ 80 ರಿಂದ 90ರ ಗಡಿಯಲ್ಲಿವೆ. ಸೇಬು ಸೇರಿದಂತೆ ಇತರೆ ಹಣ್ಣುಗಳ ದರ ಕೂಡ ಕೆಜಿಗೆ 200 ರಿಂದ 300 ರು. ಆಗಿದೆ. ನಿತ್ಯ ಅಡುಗೆಗೆ ತರಕಾರಿ ಬೇಕೆ ಬೇಕು. ಆದರೆ ಖರೀದಿ ಮಾಡುವಾಗ ಬೆಲೆ ಕೇಳಿ ಬೆದರುವಂತಾಗಿದೆ. 500 ರಿಂದ 600 ರು. ಖರ್ಚಾದರೂ ಒಂದು ಕೈಚೀಲ ತುಂಬೋದಿಲ್ಲ. ಇದು ತರಕಾರಿ ಬೆಲೆ ಎಷ್ಟು ಏರಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಆದರೆ ನಿತ್ಯ ಅಡುಗೆ ಮಾಡಲೇಬೇಕು, ತರಕಾರಿ ಇಲ್ಲದೆ ಊಟ ಮಾಡೋದು ಕಷ್ಟಸಾಧ್ಯ. ಇದರಿಂದ ಎಷ್ಟೇ ಬೆಲೆ ಏರಿಕೆಯಾದರೂ ಖರೀದಿ ‌ಮಾಡುವುದು ಅನಿವಾರ್ಯವಾಗಿದೆ.

ಆದರೆ ಎರಡು ಮೂರು ಕೆಜಿ ಖರೀದಿ ಮಾಡಲು ಬಂದವರು ‌ಒಂದು ಕೆಜಿಗೆ ತೃಪ್ತಿ ಪಡಬೇಕಾಗಿದೆ. ಒಂದು ಕೆಜಿ ಖರೀದಿಗೆ ಬಂದವರು ಅರ್ಧ ಕೆಜಿ ಮಾತ್ರ ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಕಳೆದ ಬಾರಿಯ ಬರ ಹಾಗೂ ಹೊರಗಡೆಯಿಂದ ದಾಸ್ತಾನು ಬರದೆ ಇರೋದು ಪ್ರಮುಖ ಕಾರಣವಾಗಿದೆ. ತರಕಾರಿ ವ್ಯಾಪಾರಿಗಳಿಗೂ ಹೆಚ್ಚು ಲಾಭ ಸಿಗ್ತಿಲ್ಲ. ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದರಿಂದ ವ್ಯಾಪಾರಿಗಳಿಗೂ ಲಾಭ ಇಲ್ಲದಂತಾಗಿದೆ.

ಒಟ್ಟಿನಲ್ಲಿ ರೈತರ ಹೊಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ದಾಸ್ತಾನು ಬಂದಿಲ್ಲ ಇದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ. ಈಗ ಮಳೆ ಸಮೃದ್ದವಾಗಿ ಸುರಿದಿದ್ದು, ಮುಂದೆ ತರಕಾರಿ ದರ ಒಂದು ಹಂತಕ್ಕೆ ಬರುವ ಸಾಧ್ಯತೆ ಇದೆ.