ಸಾರಾಂಶ
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಹಮ್ಮಿಕೊಂಡ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್)-2024ರ 7ನೇ ಆವೃತ್ತಿಯ ನೋಡಲ್ ಕೇಂದ್ರವಾಗಿ ಆಯ್ಕೆಯಾಗಿದ್ದು, ಇದರ ಫೈನಲ್ ಹಂತದ 36 ತಾಸುಗಳ ಹ್ಯಾಕಥಾನ್ ಸ್ಪರ್ಧೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯಲ್ಲಿ ಡಿ.11 ಮತ್ತು ಡಿ.12 ರಂದು ನಡೆಯಲಿದೆ. ರಾಷ್ಟ್ರದ ಬೇರೆ ಭಾಗಗಳಿಂದ ಅಂತಿಮ ಸುತ್ತಿಗಾಗಿ ಆಯ್ಕೆಯಾದ ಒಟ್ಟು 25 ತಂಡಗಳು ಫೈನಲ್ ಹ್ಯಾಕಥಾನ್ ಸ್ಪರ್ಧೆಯಲ್ಲಿ ಕೇಂದ್ರ್ರ ಸರ್ಕಾರದ ಕಾನೂನು ಸಚಿವಾಲಯದ ಪ್ರಶ್ನೆ/ಸವಾಲುಗಳಿಗೆ ಹ್ಯಾಕಥಾನ್ ಮೂಲಕ ಪರಿಹಾರ ಕಂಡುಕೊಳ್ಳಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಹಮ್ಮಿಕೊಂಡ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್)-2024ರ 7ನೇ ಆವೃತ್ತಿಯ ನೋಡಲ್ ಕೇಂದ್ರವಾಗಿ ಆಯ್ಕೆಯಾಗಿದ್ದು, ಇದರ ಫೈನಲ್ ಹಂತದ 36 ತಾಸುಗಳ ಹ್ಯಾಕಥಾನ್ ಸ್ಪರ್ಧೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯಲ್ಲಿ ಡಿ.11 ಮತ್ತು ಡಿ.12 ರಂದು ನಡೆಯಲಿದೆ. ರಾಷ್ಟ್ರದ ಬೇರೆ ಭಾಗಗಳಿಂದ ಅಂತಿಮ ಸುತ್ತಿಗಾಗಿ ಆಯ್ಕೆಯಾದ ಒಟ್ಟು 25 ತಂಡಗಳು ಫೈನಲ್ ಹ್ಯಾಕಥಾನ್ ಸ್ಪರ್ಧೆಯಲ್ಲಿ ಕೇಂದ್ರ್ರ ಸರ್ಕಾರದ ಕಾನೂನು ಸಚಿವಾಲಯದ ಪ್ರಶ್ನೆ/ಸವಾಲುಗಳಿಗೆ ಹ್ಯಾಕಥಾನ್ ಮೂಲಕ ಪರಿಹಾರ ಕಂಡುಕೊಳ್ಳಲಿದ್ದಾರೆ.7ನೇ ಆವೃತ್ತಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH) 2024 ಡಿ.11ರಂದು ದೇಶದಾದ್ಯಂತ 51 ನೋಡಲ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭಗೊಳ್ಳುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಏಕಕಾಲದಲ್ಲಿ ಉದ್ಘಾಟಿಸಲಿದ್ದಾರೆ. ನಂತರ ವಿಟಿಯು ಬೆಳಗಾವಿಯಲ್ಲಿ ಹ್ಯಾಕಥಾನ್ ಸ್ಪರ್ಧೆ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ ಮುಖ್ಯ ಮತ್ತು ಸೆಷನ್ ನ್ಯಾಯಾಧೀಶ ಟಿ.ಏನ್.ಇನವಳ್ಳಿ ಚಾಲನೆ ನೀಡಲಿದ್ದು, ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್.ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಆವೃತ್ತಿಯಲ್ಲಿ 54 ಸಚಿವಾಲಯಗಳು, ಇತರ ಇಲಾಖೆಗಳು, ರಾಜ್ಯ ಸರ್ಕಾರಗಳು, ಪಿಎಸ್‌ಯುಗಳು ಮತ್ತು ಉದ್ಯಮಗಳಿಂದ ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಸುಲಭವಾಗಿ ಸೇವೆ ಒದಗಿಸಲು ಸಾಧ್ಯವಾಗುವಂತೆ ತಂತ್ರಜ್ಞಾನ ಪರಿಹಾರಗಳನ್ನು ಕಂಡುಕೊಳ್ಳಲು 250ಕ್ಕೂ ಹೆಚ್ಚು ಸಮಸ್ಯೆ ಹೇಳಿಕೆಗಳನ್ನು ಸಲ್ಲಿಸಲಾಗಿತ್ತು. ಈ ಸಮಸ್ಯೆಗಳ ಮೇಲೆ ಕಾಲೇಜು ಮಟ್ಟದ ಹ್ಯಾಕಥಾನ್‌ಗಳಲ್ಲಿ 86,000ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದರೆ, 49,000 ವಿದ್ಯಾರ್ಥಿ ತಂಡಗಳು (ಪ್ರತಿ ತಂಡಕ್ಕೆ 6 ವಿದ್ಯಾರ್ಥಿಗಳು ಮತ್ತು 2 ಮೆಂಟರ್‌ಗಳು) ರಾಷ್ಟ್ರ ಮಟ್ಟದ ಸುತ್ತಿಗೆ ಶಿಫಾರಸ್‌ಗೊಂಡಿವೆ. ಹಿಂದಿನ ಆವೃತ್ತಿಗಳಂತೆ ಆಯ್ಕೆಯಾದ ವಿದ್ಯಾರ್ಥಿ ತಂಡಗಳು, ಸಚಿವಾಲಯಗಳು/ಇಲಾಖೆಗಳು/ಕೈಗಾರಿಕೆಗಳು ನೀಡಿದ ಸಮಸ್ಯೆಗಳ ಮೇಲೆ ಕಾರ್ಯನಿರ್ವಹಿಸುತ್ತವೆ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಾದ ಆರೋಗ್ಯ, ರಕ್ಷಣೆ, ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಮತ್ತು ಲಾಜಿಸ್ಟಿಕ್ಸ್, ಸ್ಮಾರ್ಟ್ ತಂತ್ರಜ್ಞಾನಗಳು, ಪರಂಪರೆ ಮತ್ತು ಸಂಸ್ಕೃತಿ, ಸುಸ್ಥಿರತೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ನೀರು, ಕೃಷಿ, ಆಹಾರ, ಹೊಸ ತಂತ್ರಜ್ಞಾನಗಳು ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಸಂಬಂಧಿಸಿದ 17 ಪ್ರಮುಖ ವಿಷಯಗಳ ಬಗ್ಗೆ ಯಾವುದಾದರೂ ವಿಷಯವನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಕೌಶಲ್ಯ ಮತ್ತು ತಮ್ಮ ಆಲೋಚನೆ ಮೂಲಕ ಪರಿಹಾರಗಳನ್ನು ಕಂಡುಕೊಂಡು ಅವುಗಳನ್ನು ಪ್ರದರ್ಶಿಸುವರು. ವಿಟಿಯುನಲ್ಲಿ ನಡೆಯುವ ಈ ಹ್ಯಾಕಥಾನ್‌ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಸೇರಿದಂತೆ 25 ತಂಡಗಳು ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಮಸ್ಯೆ ಹೇಳಿಕೆಗಳಿಗೆ ಸ್ಪರ್ಧೆ ನಡೆಯಲಿದೆ. ಅವುಗಳಲ್ಲಿ ಪ್ರಮುಖ ಸಮಸ್ಯೆ ಹೇಳಿಕೆಗಳೆಂದರೇ ಸಂವಿಧಾನವನ್ನು ಸರಳ ರೀತಿಯಲ್ಲಿ ಕಲಿಯುವುದು: ಸಂಸ್ಥೆಯ ದೃಷ್ಟಿಕೋನ, ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ವೆಬ್‌ಸೈಟಗಾಗಿ AI-ಆಧಾರಿತ ಇಂಟರಾಕ್ಟಿವ್ ಚಾಟ್ಬಾಟ್ ಅಥವಾ ವರ್ಚುವಲ್ ಅಸಿಸ್ಟೆಂಟ್ ಅನ್ನು ಅಭಿವೃದ್ಧಿಪಡಿಸುವುದು, ವಾಣಿಜ್ಯ ನ್ಯಾಯಾಲಯಗಳಿಗಾಗಿ AI-ಚಾಲಿತ ಸಂಶೋಧನಾ ಇಂಜಿನ್ ಜಾಮೀನು ರೆಕನರ್ ಸಂವಿಧಾನವನ್ನು ಸರಳ ರೀತಿಯಲ್ಲಿ ಕಲಿಯುವುದು: ನಾಗರಿಕ ದೃಷ್ಟಿಕೋನ, ಸಂವಿಧಾನವನ್ನು ಸರಳ ರೀತಿಯಲ್ಲಿ ಕಲಿಯುವುದು: ನಾಗರಿಕ ದೃಷ್ಟಿಕೋನ.