ಸಾರಾಂಶ
ತರೀಕೆರೆಯಲ್ಲಿ ಪುರಸಭೆ ಕಾರ್ಯಾಲಯದಿಂದ ಶ್ರೀ ಕನಕದಾಸರ ಜಯಂತ್ಯುತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆನಾನು ನನ್ನದು ಎಂಬುದು ಹೋಗಬೇಕು ಎಂದು ಶ್ರೀ ಕನಕದಾಸರು ಜನಜಾಗೃತಿ ಸಂದೇಶ ನೀಡಿದ ಮಹನೀಯರು ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ. ಶನಿವಾರ ಪುರಸಭೆಯಲ್ಲಿ ನಡೆದ ಶ್ರೀ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿದ್ದರು. ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ದಾಸ ಮತ್ತು ವಚನ ಸಾಹಿತ್ಯಗಳ ಆಶಯಗಳು ಸಾಮಾಜಿಕ ಸಮಾನತೆ ಮೂಡಿಸುವುದು ಆಗಿದೆ.
ಶ್ರೀ ಕನಕದಾಸರು, ಶ್ರೀ ಬಸವೇಶ್ವರರನ್ನು ಜೊತೆಯಲ್ಲಿಟ್ಟು ನೋಡುವ ಕೆಲಸವಾಗಬೇಕು.ಶ್ರೀ ಕನಕದಾಸರು ಮತ್ತು ಶ್ರೀ ಬಸವೇಶ್ವರರು ಜಾತಿ, ಅಹಂ ತೊರೆದು ಬದುಕಿದರು. ಶ್ರೀ ಕನಕದಾಸರ ಭಕ್ತಿಗೆ ಒಲಿದ ಕೃಷ್ಣ ತಿರುಗಿನಿಂತ ಎಂಬುದು ಭಕ್ತಿಯ ಶ್ರೇಷ್ಠತೆ ತೋರಿಸುತ್ತದೆ. ಭಕ್ತಿ ಹಾಗೂ ಭೌತಿಕ ಸಂಘರ್ಷವನ್ನು ಶ್ರೀ ಕನಕದಾಸರು ಎದುರಿಸಿದರು. ಲೌಕಿಕ ಜಗತ್ತಿನ ಪ್ರೀತಿ ಕಳೆದುಕೊಂಡ ಶ್ರೀ ಕನಕದಾಸರು ಅಶೋಕ ಚಕ್ರವರ್ತಿಯಂತೆ ಅಧಿಕಾರ ಹಾಗೂ ಯುದ್ಧ ತ್ಯಜಿಸಿದರು, ರಾಮಧಾನ್ಯ ಚರಿತೆಯಲ್ಲಿ ರಾಗಿಗೆ ನ್ಯಾಯ ಒದಗಿಸುವ ಮೂಲಕ ಶೋಷಿತ ಸಮಾಜದ ಪರವಾಗಿ ನಿಂತು ಕೆಲಸ ಮಾಡಿದರು ಎಂದು ಹೇಳಿದರು.ನೂರಾರು ದಾರ್ಶನಿಕರು, ಯೋಗಿಗಳು, ಸೂಫಿಗಳು, ಶರಣರು ಈ ನೆಲದಲ್ಲಿ ಅವತರಿಸಿದರು. ಇನ್ನು ಸಾಮಾಜಿಕ ಅಸಮಾನತೆ ತೊಡೆದುಹಾಕಲು ಆಗಲಿಲ್ಲ. ಕನಕನ ಕೀರ್ತನೆಗಳು, ಮಂಡಿಗೆಗಳು, ಕಾವ್ಯಗಳಲ್ಲಿ ಈ ಆಶಯಗಳಿದ್ದು ನಾವು ಈ ಚಳುವಳಿ ಮುಂದುವರಿಸೋಣ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಶ್ರೀ ಕನಕದಾಸರು ಅಶ್ವಿನಿ ದೇವತೆಗಳಲ್ಲಿ ಒಬ್ಬರು, ಶ್ರೀ ಕನಕದಾಸರು ಅಂತರಂಗದ ಕವಿಗಳು, ಸಮಾಜದ ಓರೆಕೋರೆಗಳನ್ನು ಕೀರ್ತನೆಗಳ ಮೂಲಕ ತಿದ್ದಿದರು. ವರ್ಣದ್ವೇಶ, ಜಾತಿಬೇಧ ವಿರೋಧಿಸಿದರು. ಸಾಮಾಜಿಕ ವ್ಯವಸ್ಥೆ ಅತ್ಯಂತ ಧೈರ್ಯವಾಗಿ ಹೇಳಿದರು. ಬಸವಣ್ಣ, ಶ್ರೀ ಕನಕದಾಸರು ಸರ್ವಶ್ರೇಷ್ಠರು, ಪ್ರತಿಯೊಬ್ಬರ ಭಾವನೆಯೂ ಒಂದೇ ಎಂಬ ಸಂದೇಶವನ್ನು ಶ್ರೀ ಕನಕದಾಸರು ಸಾರಿದರು. ಕುಲ ಕುಲ ಎಂದು ಹೊಡೆದಾಡ ಬೇಡಿ ಎಂದು ಸಂದೇಶ ನೀಡಿದರು. ಕೆಟ್ಟ ಪ್ರವೃತ್ತಿ ಹೋಗಲಾಡಿಸಬೇಕು ಎಂದು ಹೇಳಿದರು.ಪುರಸಭೆ ನಾಮಿನಿ ಸದಸ್ಯ ಆದಿಲ್ ಪಾಷ ಮಾತನಾಡಿ ಶ್ರೀ ಕನಕದಾಸರ ಉಪದೇಶ ಆದರ್ಶವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.ಪುರಸಭೆ ಉಪಾಧ್ಯಕ್ಷೆ ಗೀತಾ ಗಿರಿರಾಜ್ ಮಾತನಾಡಿ ಶ್ರೀ ಕನಕದಾಸರ ಜಯಂತ್ಯುತ್ಸವದ ಶುಭಾಷಯ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್, ಪುರಸಭೆ ಪರಿಸರ ಅಭಿಯಂತರಾದ ತಾಹಿರಾ ತಸ್ನೀಮ್, ಕಂದಾಯ ಅಧಿಕಾರಿ ಮಂಜುನಾಥ್, ಪುರಸಭೆ ಸದಸ್ಯರು, ನಾಮಿನಿ ಸದಸ್ಯರು, ನೌಕರರು ಭಾಗವಹಿಸಿದ್ದರು.--
8ಕೆಟಿಆರ್.ಕೆ.4ಃತರೀಕೆರೆಯಲ್ಲಿ ಪುರಸಭೆ ಕಾರ್ಯಾಲಯದಿಂದ ನಡೆದ ಶ್ರೀ ಕನಕದಾಸರ ಜಯಂತ್ಯುತ್ಸವದಲ್ಲಿ ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗೀತಾ ಗಿರಿರಾಜ್, ಮುಖ್ಯಾಧಿಕಾರಿ ವಿಜಯಕುಮಾರ್, ಪರಿಸರ ಅಭಿಯಂತರಾದ ತಾಹಿರಾ ತಸ್ನೀಮ್ ಮತ್ತಿತರರು ಭಾಗವಹಿಸಿದ್ದರು.
;Resize=(128,128))