ಎಸ್ಸೆಸ್ಸೆಲ್ಸಿ ಫಲಿತಾಂಶ: ಬ್ಯಾಡಗಿ ತಾಲೂಕು ಹಾವೇರಿ ಜಿಲ್ಲೆಗೆ ಪ್ರಥಮ

| Published : May 04 2025, 01:32 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ: ಬ್ಯಾಡಗಿ ತಾಲೂಕು ಹಾವೇರಿ ಜಿಲ್ಲೆಗೆ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ 967 ಬಾಲಕರು, 992 ಬಾಲಕಿಯರು ಸೇರಿ ಒಟ್ಟು 1959 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 638 ಬಾಲಕರು ಹಾಗೂ 837 ಬಾಲಕಿಯರು ಸೇರಿ ಒಟ್ಟು 1475 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 3 ಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ.

ಬ್ಯಾಡಗಿ: ಪ್ರಸಕ್ತ ವರ್ಷದ ಎಸ್ಸೆಸ್ಸಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬ್ಯಾಡಗಿ ತಾಲೂಕು ಶೇ. 75.29ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ.ಇತ್ತೀಚೆಗೆ ನಡೆದ ಎಸ್ಸೆಸ್ಸಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬ್ಯಾಡಗಿ ತಾಲೂಕು ತನ್ನ ಉತ್ತಮ ಸಾಧನೆಯ ಪರಂಪರೆ ಮುಂದುವರಿಸಿದೆ. ತಾಲೂಕಿನಲ್ಲಿ 967 ಬಾಲಕರು, 992 ಬಾಲಕಿಯರು ಸೇರಿ ಒಟ್ಟು 1959 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 638 ಬಾಲಕರು ಹಾಗೂ 837 ಬಾಲಕಿಯರು ಸೇರಿ ಒಟ್ಟು 1475 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 3 ಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ.ಕನ್ನಡ ಮಾಧ್ಯಮ: ಕನ್ನಡ ಮಾಧ್ಯಮದಲ್ಲಿ ತಾಲೂಕಿನ ಸ್ಪಂದನ ಕದರಮಂಡಲಗಿ ಶಾಲೆಯ ಶಶಿಕಲಾ ಸಣ್ಣನಿಂಗಪ್ಪ ಹೂಲಿಹಳ್ಳಿ ಒಟ್ಟು 619 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ, ಅದೇ ಶಾಲೆಯ ಅಂಜನಾ ಕರಬಸಪ್ಪ ನಾಯ್ಕರ 616 ಅಂಕ ಪಡೆದ ದ್ವಿತೀಯ, ಸರ್ಕಾರಿ ಹೆಡ್ಡಿಗ್ಗೊಂಡ ಶಾಲೆಯ ಶ್ರೀವತ್ಸ ರಾಮಚಂದ್ರಪ್ಪ ಆಲೂರ 614 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ.ಇಂಗ್ಲಿಷ್ ಮಾಧ್ಯಮ: ಇಂಗ್ಲಿಷ್‌ ಮಾಧ್ಯಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಅನನ್ಯ ಚಂದ್ರಶೇಖರ 619 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ, ಅಲ್ಪಸಂಖ್ಯಾತ ಮೊರಾರ್ಜಿ ಶಾಲೆಯ ಯಶೋದಾ ಸೋಮಶೇಖರ ಕುರಿ 615 ಅಂಕ ಪಡೆದು ದ್ವಿತೀಯ, ಸೆಂಟ್ ಜಾನ್ ಶಾಲೆಯ ಬಿ.ಎಂ. ಕಲ್ಪನಾ 583 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.3 ಶಾಲೆಗೆ ಶೇ. 100 ಫಲಿತಾಂಶ: ತಾಲೂಕಿನ ಮೋಟೆಬೆನ್ನೂರು ಗ್ರಾಮದ ವಿ.ಬಿ .ಕಳಸೂರಮಠ ಪ್ರೌಢಶಾಲೆ, ಕದರಮಂಡಲಗಿಯ ಸ್ಪಂದನ, ಬ್ಯಾಡಗಿಯ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಶೇ. 100 ಫಲಿತಾಂಶ ಪಡೆದಿದೆ.ಅಕ್ರಮ ಎಸಗಿದ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹ

ಹಾನಗಲ್ಲ: ಶಿಶು ಅಭಿವೃದ್ಧಿ ಇಲಾಖೆಯಲ್ಲಿ ₹5 ಕೋಟಿ ಭ್ರಷ್ಟಾಚಾರ ನಡೆದಿದ್ದರೂ ಅಧಿಕಾರಿ ಮೇಲೆ ಕ್ರಮ ಜರುಗಿಸುತ್ತಿಲ್ಲ. ತಾಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳ ಕೂಪವೇ ಇದೆ. ಅವರನ್ನು ಸಂರಕ್ಷಿಸದೇ ಕ್ರಮ ಜರುಗಿಸಬೇಕು ಎಂದು ತಾಲೂಕು ಪ್ರಗತಿಪರ ಸಂಘಟನೆ ಮುಖಂಡ ಮಂಜುನಾಥ ಕರ್ಜಗಿ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಶು ಅಭಿವೃದ್ಧಿ ಇಲಾಖೆಯಲ್ಲಿ ತಾಲೂಕಿನ 335 ಅಂಗನವಾಡಿಗಳಿಗೆ ವಿತರಿಸಬೇಕಾದ ಹಾಲಿನ ಪುಡಿ, ಸಕ್ಕರೆ ಸೇರಿದಂತೆ ಆಹಾರ ಪದಾರ್ಥಗಳನ್ನು ವಿತರಿಸದೇ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಇದು ಈಗಾಗಲೇ ವರದಿ ಮೂಲಕ ಸತ್ಯ ಎಂಬ ವಿಷಯ ಬಯಲಾಗಿದೆ. ಜೂನ್, ಜುಲೈ, ಆಗಸ್ಟ್ 3 ತಿಂಗಳ ಹಾಲಿನ ಪುಡಿಯನ್ನು ತಾಲೂಕಿನ ಮಕ್ಕಳಿಗೆ ನೀಡುವ ಬದಲು ಬೇರೆಡೆ ಸಾಗಿಸಲಾಗಿದೆ. ಇಲಾಖೆಯಲ್ಲಿ ಸ್ಟಾಕ್ ಸರಬರಾಜು ಕೂಡ ತಾಳೆ ಇಲ್ಲ ಎಂದರು.ವಿಷಯ ಬಯಲಾದ ಮೇಲೆ ಅಂಗನವಾಡಿಗಳಲ್ಲಿರುವ ರಜಿಸ್ಟರ್‌ಗಳನ್ನು ತಿದ್ದುವ ಪ್ರಕ್ರಿಯೆ ನಡೆದು, ಅದು ಕೂಡ ದಾಖಲೆ ಸಹಿತ ಮೇಲಧಿಕಾರಿಗಳಲ್ಲಿದೆ. ಆದರೂ ಈ ಅಧಿಕಾರಿಯ ಮೇಲೆ ಕ್ರಮ ಜರುಗಿಸದೇ ವರ್ಗಾವಣೆ ಮಾಡಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಕೂಡಲೇ ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮ ಜರುಗಸಿಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆ, ಜನವೇದಿಕೆ, ಕಟ್ಟಡ ಕಾರ್ಮಿಕರ ಯುನಿಯನ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಪ್ರಶಾಂತ ಮುಚ್ಚಂಡಿ, ಎನ್.ಎಂ. ಪೂಜಾರ, ಚಂದ್ರಪ್ಪ ಹೊಸಳ್ಳಿ, ಗೀತಾಂಜಲಿ ತಳವಾರ, ನಾಗಿಬಾಯಿ ಲಮಾಣಿ, ಚನ್ನಮ್ಮ ಲಮಾಣಿ, ಮುನಿರ್‌ಅಹಮ್ಮದ್ ಗೊಂದಿ, ಫಕ್ಕೀರಪ್ಪ ಕಾಕೋಳ, ಸಂಜಯ ಲಮಾಣಿ, ರವಿ ಜಾಲಗೇರಿ, ಫಕ್ಕೀರೇಶ ಭಜಂತ್ರಿ, ಶಂಬಾನಾ ಹಾನಗಲ್ಲ, ಅಸಮಾ ಮಾಸನಕಟ್ಟಿ ಮೊದಲಾದವರು ಇದ್ದರು.