ವಿದ್ಯಾರ್ಥಿಗಳಿಗೆ ಜ್ಞಾನ-ಕೌಶಲ್ಯ ಎರಡೂ ಇದ್ದರೆ ಯಶಸ್ಸು ಸಾಧ್ಯ: ಡಾ. ಗುರುಬಸವರಾಜು

| Published : May 22 2024, 12:45 AM IST

ವಿದ್ಯಾರ್ಥಿಗಳಿಗೆ ಜ್ಞಾನ-ಕೌಶಲ್ಯ ಎರಡೂ ಇದ್ದರೆ ಯಶಸ್ಸು ಸಾಧ್ಯ: ಡಾ. ಗುರುಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

೧೮ ವರ್ಷ ವಯಸ್ಸಿನವರೆಗಿನ ಈ ಎರಡು ವರ್ಷಗಳ ಕಾಲವು ವಿದ್ಯಾರ್ಥಿ ಜೀವನದ ಬಹಳ ಪ್ರಮುಖವಾದ ಘಟ್ಟವಾಗಿದೆ. ೧೬ ರಿಂದ ೧೮ ವರ್ಷ ವಯಸ್ಸಿನ ಈ ಘಟ್ಟವು ಅತ್ಯಂತ ಜಾಗೃತಿಯಿಂದಿರಬೇಕಾದ ಘಟ್ಟವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಕೌಶಲ್ಯ ಮತ್ತು ಜ್ಞಾನವು ಮೇಲ್ನೋಟಕ್ಕೆ ಒಂದೇ ತರಹ ಕಂಡರೂ ಅವರೆಡೂ ಬೇರೆಯಾಗಿದ್ದು, ವಿದ್ಯಾರ್ಥಿಯಾದವರಿಗೆ ಈ ಎರಡರಲ್ಲೂ ಪ್ರಜ್ಞೆ ಇದ್ದರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಶ್ರೀ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಮತ್ತು ಮೆಡಿಕಲ್ ಸಹಾಯಕ ಪ್ರಾಧ್ಯಾಪಕ ಡಾ. ಗುರುಬಸವರಾಜು ಯಲಗಚ್ಚಿನ ಸಲಹೆ ನೀಡಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಸನಾಂಬ ಕಲಾಕ್ಷೇತ್ರದಲ್ಲಿ ಬ್ರಿಲಿಯೆಂಟ್ ಪಿಯು ಕಾಲೇಜಿನ ಈ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ಪರ್ವ ಕಾಲದ ಸಮಯ ಎಷ್ಟು ಬೇಗ ಕಳೆದು ಹೋಗುತ್ತದೆ ಎನ್ನುವ ಬಗ್ಗೆ ನಾನು ಲೆಕ್ಕಚಾರ ಹಾಕುತ್ತಿದ್ದು, ೧೮ ವರ್ಷ ವಯಸ್ಸಿನವರೆಗಿನ ಈ ಎರಡು ವರ್ಷಗಳ ಕಾಲವು ವಿದ್ಯಾರ್ಥಿ ಜೀವನದ ಬಹಳ ಪ್ರಮುಖವಾದ ಘಟ್ಟವಾಗಿದೆ. ೧೬ ರಿಂದ ೧೮ ವರ್ಷ ವಯಸ್ಸಿನ ಈ ಘಟ್ಟವು ಅತ್ಯಂತ ಜಾಗೃತಿಯಿಂದಿರಬೇಕಾದ ಘಟ್ಟವಾಗಿದೆ ಎಂದರು.ಈ ಸಮಯದಲ್ಲಿ ವಿದ್ಯಾರ್ಥಿಗಳೂ ಉದಾಸೀನ ಮಾಡದಂತೆ ತಮ್ಮ ಗುರಿ ಕಡೆಗೆ gಮನಹರಿಸಬೇಕು. ಯಾರಿಗೂ ಅರಿವಿಲ್ಲದಂತೆ ಎರಡು ವರ್ಷ ಕಳೆದು ಹೋಗುತ್ತದೆ. ಭಾರತದಲ್ಲಿ ವರ್ಷವೊಂದಕ್ಕೆ ೧೫ ಲಕ್ಷ ಜನ ಇಂಜಿನಿಯರಿಂಗ್ ಪದವೀಧರರಾಗಿ ಹೊರಬರುತ್ತಿದ್ದಾರೆ. ಇವರಲ್ಲಿ ಮೂರರಿಂದ ನಾಲ್ಕು ಲಕ್ಷ ಜನ ವಿದ್ಯಾರ್ಥಿಗಳಿಗೆ ಮಾತ್ರ ಒಳ್ಳೆಯ ಉದ್ಯೋಗ ಸಿಗುತ್ತಿದೆ ಎಂದು ಕಿವಿಮಾತು ಹೇಳಿದರು.

ಕೌಶಲ್ಯ ಮತ್ತು ಜ್ಞಾನವು ಮೇಲ್ನೋಟಕ್ಕೆ ಒಂದೇ ರೀತಿ ಕಂಡರೂ ಅವರೆಡೂ ಬೇರೆ ಬೇರೆಯಾಗಿದ್ದು, ಜ್ಞಾನದ ಜೊತೆ ಕೌಶಲ್ಯ ಇದ್ದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಬದುಕು ಹೊಂದಲು ಸಾಧ್ಯ. ಬರುವ ದಿನಗಳಲ್ಲಿ ಬಹಳ ದೊಡ್ಡ ಆತಂಕ ಎದುರಿಸಬೇಕಾಗಿದೆ. ವೃತ್ತಿಪರತೆ ಮೆರೆಯಬೇಕಾದರೆ ಮೊದಲು ನಿಮ್ಮಲ್ಲಿ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶ್ರೀರಂಗ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಡಾ.ಎಚ್.ಎಸ್. ಅನಿಲ್ ಕುಮಾರ್ ಮಾತನಾಡಿ, ನಮ್ಮ ಕಾಲೇಜಿನ ೧೧ನೇ ವರ್ಷದ ಓರಿಯಂಟೇಷನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಳೆದ ೧೧ ವರ್ಷಗಳ ಹಿಂದೆ ನನ್ನ ಗುರುಗಳಾದ ಪ್ರೋ. ಹುಸೇನ್ ಅವರು ನನಗೆ ಭೇಟಿಯಾದ ವೇಳೆ ಪಿಯು ಕಾಲೇಜು ಪ್ರಾರಂಭಿಸುವ ಚರ್ಚೆ ನಡೆಸಿದರು. ವಿದ್ಯಾರ್ಥಿಗಳೂ ಟ್ಯೂಷನ್ ಗೆ, ಶಾಲೆಗೆ ಬೇರೆ ಬೇರೆ ಕಡೆ ತಿರುಗಬೇಕಾಗಿತ್ತು. ಇವೆಲ್ಲವನ್ನೂ ತಪ್ಪಿಸಿ ಕ್ಲಾಸ್, ನೀಟ್, ಸಿಇಟಿ, ಜೆಇಇ ಎಲ್ಲವನ್ನೂ ಒಂದೇ ಸೂರಿನಡಿ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ನನ್ನ ಗುರುಗಳು ಪ್ರೋತ್ಸಾಹಿಸಿದರು. ನಂತರದಲ್ಲಿ ದೇವರಾಜೇಗೌಡರ ಮತ್ತು ಎಲ್ಲರ ಸಹಕಾರದಲ್ಲಿ ಇಂದು ಬ್ರಿಲಿಯೆಂಟ್ ಕಾಲೇಜು ಆರಂಭಗೊಂಡು ಈಗ ಉತ್ತಮವಾಗಿ ಬೆಳೆದಿದೆ ಎಂದು ಕಾಲೇಜು ನಡೆದು ಬಂದ ದಾರಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಿದರು.

ನಂತರ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ರಿಲಿಯೆಂಟ್ ಪಿಯು ಕಾಲೇಜು ಪ್ರಾಂಶುಪಾಲ ಹಾಗೂ ಆಡಳಿತಾಧಿಕಾರಿ ಪ್ರೋ.ದೇವರಾಜೇಗೌಡ, ಸೊಸೈಟಿ ಉಪಾಧ್ಯಕ್ಷೆ ಪುಷ್ಪಾ, ರಘು ಇತರರು ಇದ್ದರು.