ಧರ್ಮದ ತಳಹದಿಯಲ್ಲಿ ಸಾಗಿದಾಗ ಯಶಸ್ಸು

| Published : Jul 03 2025, 11:46 PM IST / Updated: Jul 03 2025, 11:47 PM IST

ಸಾರಾಂಶ

ಜನನ, ಮರಣ ತಪ್ಪಿದಲ್ಲ. ಹೀಗಾಗಿ ಬದುಕಿನ ಅವಧಿಯಲ್ಲಿ ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತಿನಲ್ಲಿ ದಾನ ಧರ್ಮ ಮಾಡುವ ಗುಣ ಬೆಳೆಸಿಕೊಳ್ಳಬೇಕು

ಶಿಗ್ಗಾಂವಿ: ಧರ್ಮದ ತಳಹದಿ ಮೇಲೆ ಬದುಕು ಸಾಗಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಿದೆ. ಅದಕ್ಕಾಗಿ ಮನುಷ್ಯ ಭಕ್ತಿಮಾರ್ಗ ಆಯ್ಕೆ ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಮುರುಘೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿರುವ ಕಾಶಿ ಶಾಖಾ ಮಠವಾದ ಮುರುಘೇಂದ್ರ ಮಠದಲ್ಲಿ ನಡೆದ ಲಿಂ. ವೀರಭದ್ರಯ್ಯ ಸ್ವಾಮೀಜಿಯವರ ೩೨ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜನನ, ಮರಣ ತಪ್ಪಿದಲ್ಲ. ಹೀಗಾಗಿ ಬದುಕಿನ ಅವಧಿಯಲ್ಲಿ ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತಿನಲ್ಲಿ ದಾನ ಧರ್ಮ ಮಾಡುವ ಗುಣ ಬೆಳೆಸಿಕೊಳ್ಳಬೇಕು. ತಂದೆ- ತಾಯಿಗಳಿಗೆ ಗೌರವ ನೀಡಬೇಕು. ಅವರ ವೃದ್ಧಾಪ್ಯದಲ್ಲಿ ಪಾಲನೆ ಮಾಡುವ ಮೂಲಕ ಅವರ ಋಣ ತೀರಿಸುವ ಕಾರ್ಯ ಶ್ರೇಷ್ಠವಾಗಿದೆ ಎಂದರು.

ಮಠದಲ್ಲಿ ವೀರಭದ್ರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಅಂಗವಾಗಿ ಅವರ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಶಿವಸ್ತೋತ್ರ ಶತನಾಮಾವಳಿ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಹಿರೇಬೆಂಡಿಗೇರಿ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ದಯ್ಯ ಶಾಸ್ತ್ರಿ ಹಿರೇಮಠ ಸಮ್ಮುಖ ವಹಿಸಿದ್ದರು. ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ಕೇದಾರೆಪ್ಪ ಬಗಾಡೆ, ಶಿವಾನಂದ ಮ್ಯಾಗೇರಿ, ರಾಮಣ್ಣ ಕಮಡೊಳ್ಳಿ, ಗೋಣೆಪ್ಪ ಜಾರಗಟ್ಟಿ, ವಿರೂಪಾಕ್ಷಪ್ಪ ಅಂಗಡಿ, ಸಿದ್ದಪ್ಪ ಹರಿಜನ, ಚನಬಸಯ್ಯ ಹಿರೇಮಠ, ವಿರೂಪಾಕ್ಷಪ್ಪ ಪಟ್ಟೇದ ಇತರರು ಇದ್ದರು.