ಸಾರಾಂಶ
ರನ್ನ ಬೆಳಗಲಿಯ ಐತಿಹಾಸಿಕ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದಂದು ಸೂರ್ಯೋದಯದ ಸೂರ್ಯರಶ್ಮಿಯು ಲಿಂಗಕ್ಕೆ ಸ್ಪರ್ಶವಾಗುವ ಅಮೋಘ ಗಳಿಗೆಯನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ರನ್ನ ಬೆಳಗಲಿಯ ಐತಿಹಾಸಿಕ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದಂದು ಸೂರ್ಯೋದಯದ ಸೂರ್ಯರಶ್ಮಿಯು ಲಿಂಗಕ್ಕೆ ಸ್ಪರ್ಶವಾಗುವ ಅಮೋಘ ಗಳಿಗೆಯನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಮಾತನಾಡಿ, ಪ್ರತಿ ಯುಗಾದಿಯಂದು ಕಲೆ, ಕಲಾವಿದರ ತವರು ಎನಿಸಿಕೊಂಡ ಮಹಾಕವಿ ರನ್ನನ ತವರೂರಿನ ಪ್ರಾಚೀನ ಅಮೃತೇಶ್ವರ ದೇವಾಲಯದ ಮಹಾಲಿಂಗಕ್ಕೆ ಸೂರ್ಯ ರಸ್ಮಿ ಸ್ಪರ್ಶವಾಗುವುವುದು ಅಮೋಘ. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಈ ದೃಶ್ಯವನ್ನು ಕಣ್ತುಂಬಿಕೊಂಡು ಕೃತಾರ್ಥರಾಗುತ್ತಾರೆ. ಭಾರತೀಯರ ಸಂಸ್ಕೃತಿಯಂತೆ ಇಂದಿನಿಂದ ಹೊಸ ವರ್ಷ ಪ್ರಾರಂಭವಾಗುವುದು ಎಂದರು.
ಅರ್ಚಕ ಪಂಡಿತ ಪೂಜಾರಿ ಮಾತನಾಡಿ, ಚಾಲುಕ್ಯರ ಕಾಲದ ಈ ದೇವಾಲಯ ಅತ್ಯಂತ ಭವ್ಯ ಮತ್ತು ಅಮೋಘವಾದ ವಾಸ್ತು ಶಿಲ್ಪಕಲೆಗಳಿಂದ ರೂಪುಗೊಂಡಿದೆ. ಸೂರ್ಯೋದಯದ ವೇಳೆ ಮಹಾಲಿಂಗಕ್ಕೆ ಸೂರ್ಯರಶ್ಮಿಯ ಸ್ಪರ್ಶ ಸಂಭವಿಸುತ್ತದೆ ಎಂದರು.ಈ ವೇಳೆ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಸದಾಶಿವ ಪುರಾಣಿಕ, ಎಸ್.ಬಿ. ರಡರಟ್ಟಿ, ಎ.ಎಂ. ಕಂಬಾರ, ಸದಾಶಿವ ಹೊಸಟ್ಟಿ, ಈಶ್ವರ ಪೂಜಾರಿ, ವಿಠ್ಠಲ ಮುಧೋಳ, ಮುತ್ತಪ್ಪ ಹೊಸಪೇಟೆ ಇನ್ನಿತರರು ಉಪಸ್ಥಿತರಿದ್ದರು.ಮಹಾಲಿಂಗಪುರಸಮೀಪದ ರನ್ನ ಬೆಳಗಲಿಯ ಐತಿಹಾಸಿಕ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದಂದು ಸೂರ್ಯೋದಯದ ಸೂರ್ಯರಶ್ಮಿಯು ಲಿಂಗಕ್ಕೆ ಸ್ಪರ್ಶವಾಗುವ ಅಮೋಘ ಗಳಿಗೆಯನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.