ಮಕ್ಕಳಲ್ಲಿ ಹಿರಿಯರ ಗೌರವಿಸುವ ಗುಣ ಕಲಿಸಿ: ಪೊಲೀಸಗೌಡ್ರ

| Published : Jul 06 2025, 11:48 PM IST

ಸಾರಾಂಶ

ಮಕ್ಕಳಿಗೆ ಓದುವುದರ ಜತೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಗುರು ಹಿರಿಯರನ್ನು ಗೌರವಿಸುವ, ತಂದೆ- ತಾಯಿಯರನ್ನು ಪೂಜಿಸುವ ಪ್ರವೃತ್ತಿ ಬೆಳೆಸಬೇಕು.

ರಾಣಿಬೆನ್ನೂರು: ಪೋಷಕರು ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಹೊಂದಿ ಅವರ ಶೈಕ್ಷಣಿಕ ಚಟುವಟಿಕೆ ಬಗ್ಗೆ ನಿಗಾ ವಹಿಸಿದಲ್ಲಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಶ್ರೀ ಮಾತಾರವಿಂದ ಗ್ರಾಮೀಣ ವಿದ್ಯಾಲಯ ಸಮಿತಿಯ ಅಧ್ಯಕ್ಷ ಪೊಲೀಸಗೌಡ್ರ ತಿಳಿಸಿದರು.ತಾಲೂಕಿನ ಬಿಲ್ಲಳ್ಳಿ ಗ್ರಾಮದ ಮಾತಾರವಿಂದ ಪ್ರೌಢಶಾಲೆಯಲ್ಲಿ ನಡೆದ ಪೋಷಕರ ಸಭೆ ಹಾಗೂ ಶಾಲಾ ಸಂಸತ್ ಚುನಾವಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಓದುವುದರ ಜತೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಗುರು ಹಿರಿಯರನ್ನು ಗೌರವಿಸುವ, ತಂದೆ- ತಾಯಿಯರನ್ನು ಪೂಜಿಸುವ ಪ್ರವೃತ್ತಿ ಬೆಳೆಸಬೇಕು. ಹೀಗಾದಲ್ಲಿ ಅಂತಹ ಮಕ್ಕಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದರು.ಸಂಸ್ಥೆಯ ಸದಸ್ಯರಾದ ಮಲ್ಲೇಶ ಮತ್ತೂರ, ಸುರೇಶ ಬಿದರಿ, ಪುಟ್ಟನಗೌಡ ಸೊರಟೂರ, ಮುಖ್ಯೋಪಾಧ್ಯಾಯ, ಚಂದ್ರಶೇಖರ ಅಸುಂಡಿ, ಎಂಎಸ್ ಅಂಗಡಿ, ಸಿ.ಬಿ. ಪೊಲೀಸಗೌಡ್ರ, ಗಿರೀಶ ಯತ್ತಿನಹಳ್ಳಿ, ಶಾಲಾ ಸಹ ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಮತ್ತಿತರರಿದ್ದರು.ಇದೇ ಸಂದರ್ಭದಲ್ಲಿ 2025- 26ನೇ ಸಾಲಿನ ಶಾಲಾ ಸಂಸತ್ ಚುನಾವಣೆಯಲ್ಲಿ ಪ್ರಧಾನಿಯಾಗಿ ಮೇಘನಾ ಪೂಜಾರ ಮತ್ತು ಉಪಪ್ರಧಾನಿಯಾಗಿ ಜರೀನಾ ಮತ್ತು ಇತರ ವಿದ್ಯಾರ್ಥಿಗಳು ವಿವಿಧ ಸ್ಥಾನಗಳಿಗೆ ಆಯ್ಕೆಯಾದರು.ಆರು ಕಿಶೋರ ಕಾರ್ಮಿಕರು ಪತ್ತೆ

ಹಾವೇರಿ: ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಂಗವಾಗಿ ನಗರದ ವಿವಿಧ ಗ್ಯಾರೇಜ್, ವಾಣಿಜ್ಯ ಅಂಗಡಿಗಳಲ್ಲಿ ಕಾರ್ಮಿಕ ನಿರೀಕ್ಷಕರ ನೇತೃತ್ವದಲ್ಲಿ ಶುಕ್ರವಾರ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ತಪಾಸಣೆ ಕಾರ್ಯ ನಡೆಸಿ, ಆರು ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ.ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಹಾಗೂ ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶರಣಮ್ಮ ಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಂ ಬೆಂಗಾಲಿ, ಕಾರ್ಮಿಕ ನಿರೀಕ್ಷಕ ಕಿರಣಕುಮಾರ ಇಂಗಳೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರ, ಶಿಕ್ಷಣ ಇಲಾಖೆಯ ವಿನಾಯಕ ಗಡ್ಡದ, ಪೊಲೀಸ್ ಇಲಾಖೆಯ ಪ್ರಶಾಂತ ಎಸ್.ಡಿ., ಮಕ್ಕಳ ರಕ್ಷಣಾ ಘಟಕದ ಭುವನೇಶ್ವರಿ ಹಿರೇಮಠ, ಚೈಲ್ಡ್ ಜೈನ್‌ನ ನಾಗರಾಜ ಕುರಿಯವರ, ಸ್ತ್ರೀಶಕ್ತಿ ತೆರೆದ ತಂಗುದಾನದ ಪುಟ್ಟಪ್ಪ ಹರವಿ ಇತರರು ಇದ್ದರು.