ಸಾರಾಂಶ
ಮುಂಡಗೋಡ: ಇಂಗ್ಲಿಷ್ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಬರುವಂತೆ ಸರಳವಾಗಿ ಪಾಠ ಮಾಡಿದರೆ ಮಾತ್ರ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುತ್ತದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಮುಡೆಣ್ಣವರ ತಿಳಿಸಿದರು.ತಾಲೂಕು ಇಂಗ್ಲಿಷ್ ವಿಷಯ ವೇದಿಕೆಯ ವತಿಯಿಂದ ಶಿಕ್ಷಣ ಇಲಾಖೆಯ ಆದೇಶದಂತೆ ತಾಲೂಕಿನ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಮಾಡುವ ಶಿಕ್ಷಕರಿಂದ ತಾಲೂಕಿನ ಅಂದಲಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಶ್ನೆಪತ್ರಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮೂರು ಮಾದರಿ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ ಶಿಕ್ಷಣ ಇಲಾಖೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಅದರಂತೆ ಶಿಕ್ಷಕರು ಶಿಕ್ಷಣ ಇಲಾಖೆಯ ಆದೇಶದಂತೆ ನೀಲನಕ್ಷೆ ಪ್ರಕಾರ ತಯಾರಿಸಬೇಕು ಹಾಗೂ ಇಂಗ್ಲಿಷ್ ಇಡೀ ಜಗತ್ತಿನಲ್ಲಿ ಬಳಸುವ ಏಕೈಕ ಭಾಷೆಯಾಗಿದೆ. ಹಾಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಅದರ ಮಹತ್ವ ತಿಳಿಸಬೇಕು ಎಂದರು.ಮುಖ್ಯಾದ್ಯಾಪಕ ಮಂಜುನಾಥ ಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವೇದಿಕೆಯ ಅಧ್ಯಕ್ಷರಾದ ಸವಿತಾ ವೇರ್ಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಶ್ಮಿ ಎನ್.ಆರ್., ಮಧುಮತಿ ಹಿರೇಮಠ, ಮಂಜುನಾಥ ಕಂಬಿಮಠ, ಪೂರ್ಣಿಮಾ ಗೌಡ, ಇಸ್ಸಾಕ್, ತಾಜೇವಾಲೆ, ರೂಪಾ ನಾಯ್ಕ, ಮಂಜುನಾಥ, ಶಾಡಂಬಿ, ಚೈತ್ರಾ ಚಿಗಳ್ಳಿ ಉಪಸ್ಥಿತರಿದ್ದರು.ವಾಸುದೇವ ಮಡ್ಲಿ ನಿರೂಪಿಸಿದರು. ವಾಣಿಶ್ರೀ. ನಾಗಮ್ಮನವರ ಸ್ವಾಗತಿಸಿದರು. ರಮೇಶ ಪವಾರ ವಂದಿಸಿದರು. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು.ಪುಸ್ತಕಗಳು ಮನುಷ್ಯನ ಅತ್ಯುತ್ತಮ ಸಂಗಾತಿ
ಅಂಕೋಲಾ: ಗ್ರಂಥಗಳು ಮಾನವ ಜೀವನದ ಅತ್ಯುತ್ತಮ ಸಂಗಾತಿಗಳಾಗಿದ್ದು, ಬದುಕಿಗೆ ಬೆಳಕಿನ ದಾರಿ ತೋರುವ ಜ್ಞಾನದ ದೀವಟಿಗೆಗಳಾಗಿವೆ. ಬದುಕಿನ ಉನ್ನತಿಗೆ ಓದು ಬಹುಮುಖ್ಯವಾದದ್ದು. ಇಂದಿನ ಮೊಬೈಲ್, ಇಂಟರ್‌ನೆಟ್ ಯುಗದಲ್ಲಿ ಓದುವ ಹವ್ಯಾಸ ಹೆಚ್ಚಿಸುವಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತಲಿವೆ ಎಂದು ಲೇಖಕ, ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ತಿಳಿಸಿದರು.ಇಲ್ಲಿನ ಸರ್ಕಾರಿ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ನಿಮಿತ್ತ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಅಂಕೋಲಾ ಗ್ರಂಥಾಲಯ ಅಮೂಲ್ಯ 40 ಸಾವಿರ ಗ್ರಂಥಗಳನ್ನು ಹೊಂದಿದ್ದು, ಉನ್ನತ ಪರೀಕ್ಷೆಗೆ ಸ್ಪರ್ಧಿಸುವ ವಿದ್ಯಾರ್ಥಿಗಳಿಗಾಗಿ ವಿಶೇಷ ವಿಭಾಗ ಹೊಂದಿರುವುದು ಗಮನಾರ್ಹ ಸಂಗತಿಯಾಗಿದೆ. ಅಂಕೋಲೆಯ ಸಾರ್ವಜನಿಕ ಗ್ರಂಥಾಲಯ ಪ್ರತಿದಿನ ಓದುಗರಿಂದ ತುಂಬಿರುವುದು ಶ್ಲಾಘನೀಯ ಎಂದರು.ಸಾಕಷ್ಟು ಸಂಖ್ಯೆಯ ಓದುಗರ ಸಮ್ಮುಖದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಗ್ರಂಥಾಲಯದ ಅಧಿಕಾರಿ ಸುಭಾಷ ಡಿ. ನಾಯ್ಕ ಸ್ವಾಗತಿಸಿದರು. ಓದುಗರಾದ ವಿಠ್ಠಲ ಶೆಟ್ಟಿ, ರವೀಂದ್ರ ಪಾತರಫೇಕರ ಮಾತನಾಡಿ, ಈ ಸರ್ಕಾರಿ ಗ್ರಂಥಾಲಯ ಓದುಗರಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದರು.ಓದುಗರಾದ ಜನಾರ್ದನ ಬಬ್ರುವಾಡಕರ, ಶ್ರೀಕಾಂತ ಆಚಾರಿ, ನಾಗರತ್ನ ಡಿ.ಜಿ. ಸದಾನಂದ ಶೆಟ್ಟಿ ಇತರರು ಉಪಸ್ಥಿತರಿದ್ದರು. ಗ್ರಂಥಾಲಯದ ಸಹಾಯಕ ಶ್ರೀನಿವಾಸ ನಾಯಕ ವಂದಿಸಿದರು.