ಶಿಕ್ಷಕರ ಕಷ್ಟ- ನಷ್ಟಗಳಲ್ಲಿ ಸದಾ ಭಾಗಿಯಾಗುವೆ: ಕೆ.ವಿ. ಜಗನ್ನಾಥ್

| Published : Dec 29 2024, 01:20 AM IST

ಸಾರಾಂಶ

ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಶಿಕ್ಷಕರು ನನ್ನನ್ನು ಬೆಂಬಲಿಸಿದ್ದು ನಾನು ಅವರ ಋಣ ತೀರಿಸಲು ಸಾಧ್ಯವಿಲ್ಲ .

ಮುಳಬಾಗಿಲು: ಕಳೆದ ೧೨ ವರ್ಷಗಳಿಂದ ತಾಲೂಕಿನ ಶಿಕ್ಷಕರಿಗೆ ದಿನ ದರ್ಶಿಕೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಸದಾ ಶಿಕ್ಷಕರ ಕಷ್ಟ- ನಷ್ಟಗಳಲ್ಲಿ ಭಾಗಿಯಾಗುತ್ತೇನೆಂದು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಕೆ.ವಿ. ಜಗನ್ನಾಥ್ ಹೇಳಿದರು. ನಗರದ ಶ್ರೀ ಯೋಗಿ ನಾರಾಯಣ ಕಲ್ಯಾಣ ಮಂಟಪದಲ್ಲಿ ಕೆ.ವಿ.ಜೆ ಸಿಂಡಿಕೇಟ್ ವತಿಯಿಂದ ೨೦೨೫ನೇ ವರ್ಷದ ದಿನದರ್ಶಿಕೆಗಳನ್ನು ವಿತರಿಸಿ ಮಾತನಾಡಿ, ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಶಿಕ್ಷಕರು ನನ್ನನ್ನು ಬೆಂಬಲಿಸಿದ್ದು ನಾನು ಅವರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.

ಅನುದಾನಿತ ಪ್ರೌಢಶಾಲೆಗಳ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಕರು ದಿನದರ್ಶಿಕೆಗಳನ್ನು ಕೇವಲ ಬಿಲ್ಲು, ಬೆಲ್ಲಿಗೆ ಸೀಮಿತಗೊಳಿಸದೆ ತಮ್ಮ ಕರ್ತವ್ಯ ಎಷ್ಟರಮಟ್ಟಿಗೆ ಬಳಕೆ ಮಾಡಿದ್ದೇವೆ ಎಂಬುದನ್ನು ನಮೂದಿಸುವ ಕೆಲಸ ಮಾಡಬೇಕಾಗಿದೆ. ದಿನಗಳನ್ನು ಲೆಕ್ಕಹಾಕಿ ಸಂಬಳ ತೆಗೆದುಕೊಳ್ಳುವ ಬದಲು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ಯುವ ಮುಖಂಡ ಕಲ್ಲುಪಲ್ಲಿ ಪ್ರಕಾಶ್, ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಾಲಿಬಾಲ್ ಶಿವಣ್ಣ, ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಆವಣಿ ಆನಂದ್ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಬಿ. ಚಿತ್ರ, ಎಸ್ಸಿ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಸಿ. ರಘುನಾಥ್, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ವಿ. ಸುಬ್ರಮಣಿರೆಡ್ಡಿ, ಭಾರತೀಯ ಸೇವಾ ದಳದ ಅಧ್ಯಕ್ಷ ಬಿ.ಎಸ್. ವೇಣುಗೋಪಾಲ್, ಇಸಿಒ ಗುರುರಾಜ್, ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಪೈಜುಲ್ಲ, ಆರ್. ಕೃಷ್ಣಪ್ಪ, ಜಿ.ಎನ್. ರಾಜ್ ಕುಮಾರ್, ಕೆ.ಬಿ. ನಾಗರಾಜ್, ವೆಂಕಟರಾಮಯ್ಯ, ಎನ್. ಚಂದ್ರಪ್ಪ, ವಿ.ಎಸ್ ಚಿಕ್ಕರೆಡ್ಡಪ್ಪ, ಎಂ. ಸುಬ್ಬರಾಯಪ್ಪ, ಎನ್. ಗಂಗಪ್ಪ, ಬ್ರಹ್ಮಾನಂದರೆಡ್ಡಿ, ವರದರಾಜ್ ಇದ್ದರು.