ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಭಾರತವು ಭವ್ಯ ಸಂಸ್ಕೃತಿಯಿಂದ ಮೆರೆದ ದೇಶವಾಗಿದ್ದು, ಈ ನಾಡಿನ ಜನರ ಮೈಮನಗಳಲ್ಲಿ ಭಗವತ್ ಸಂಸ್ಕೃತಿ ಎಂಬುದನ್ನು ತುಳಕಾಡುತ್ತಿದೆ ಎಂದು ಕನ್ಹೇರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿ ಆಯೋಜಿಸಿದ್ದ ಸನಾತನ ಮತ್ತು ಕೃಷಿ ವಿಷಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ನಮ್ಮ ಸಂಸ್ಕೃತಿಯನ್ನು ಗಮನಿಸುವ ಚಿಕ್ಕಮಕ್ಕಳು ಸಹ ದೇವರನ್ನು ನಮಿಸುವಂತಹ ಪರಿಪಾಠ ಇಂದಿನವರೆಗೂ ಇದೆ. ಆದರೆ ಹಿಂದೂ ಸಮಾಜದಲ್ಲಿ ಕೆಡುಕನ್ನು ಹುಟ್ಟಿಸಲು ನಮ್ಮ ಅಣ್ಣ ತಮ್ಮಂದಿರಲ್ಲಿ ಜಗಳವನ್ನು ಹಚ್ಚಲು ಬ್ರೀಟಿಷರು ಉಂಟು ಮಾಡುತ್ತಿದ್ದರು. ಈಗ ಸತ್ಯದ ಆಳವಾದ ಅರಿವಾಗಬೇಕಾದರೆ ವೇದಗಳನ್ನು ನಿರ್ಮಿಸಿದ ಋಷಿಮುನಿಗಳು ಸ್ತ್ರೋತ್ರಗಳಿಂದ ಕಾಣುವ ಎಲ್ಲ ಋಷಿಗಳು ವ್ಯವಸಾಯದವರೆಲ್ಲರೂ ನಮ್ಮವರೇ ಎಂದರು.
ಜಾತಿಗಳಲ್ಲಿ ವರ್ಣಗಳಿದ್ದವು, ವರ್ಣಗಳಲ್ಲಿ ಜಾತಿಗಳಿರಲಿಲ್ಲ. ಗುಣ ಕರ್ಮಗಳ ಅನುಸಾರವಾಗಿ ಜಾತಿಗಳಿದ್ದವು. ಈ ಕುರಿತು ೧೮೮೧ರಲ್ಲಿ ಸರ್ವೆ ಮಾಡಿ ಕಲ್ಕತ್ತ, ದೆಹಲಿ, ಮದ್ರಾಸ, ಮುಂಬೈ ಈ ನಾಲ್ಕು ಪ್ರಾಂಥದವರು ಆಯೋಗವನ್ನು ರಚಿಸಿ ಪಾರ್ಲಿಮೆಂಟಿಗೆ ಕಳುಹಿಸಲಾಗಿತ್ತು. ಪುಸ್ತಕಗಳ ಅಧ್ಯಯನ ಮಾಡಿ ಈ ಕುರಿತು ೧೦ ಗ್ರಂಥಗಳನ್ನು ಬರೆಯಲಾಯಿತು. ಅವುಗಳಲ್ಲಿ ಶಿಕ್ಷಣ ೭ ಲಕ್ಷ ಗುರುಕುಲಗಳಿದ್ದವು, ೧೬೦೦ ವಿಶ್ವ ವಿದ್ಯಾಲಯಗಳು ದೇಶಗಳಲ್ಲಿದ್ದವು ಒಂದು ವಿಶ್ವವಿದ್ಯಾಲಯದಲ್ಲಿ ೧೦ ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಶೇ.೯೪ ರಷ್ಟು ಶಾಲೆಗೆ ಹೋಗುತ್ತಿದ್ದರು. ಪ್ರತಿಯೊಂದು ವಿಷಯದಲ್ಲಿ ಪ್ರತಿಷತ ಮಕ್ಕಳು ಇರುತ್ತಿದ್ದರು. ಆದರೆ, ಅವರಲ್ಲಿ ಜಾತಿಬೇಧಗಳು ವರ್ಣಬೇಧಗಳು ಇರಲಿಲ್ಲ. ಸಮಾಜ ಒಡೆಯುವ ಉದ್ದೇಶ ಇರಲಿಲ್ಲಾ ಒಳ್ಳೆಯ ಭಾವನೆಗಳೇ ಅಂದಿನ ದಿನಮಾನದಲ್ಲಿ ನಮ್ಮ ಸನಾತನ ಪದ್ದತಿಯಂತೆ ನಡೆಯುತ್ತ ನಡೆದು ಬಂದಿದೆ. ಮಣ್ಣು ಎಂಬುದು ಒಂದೇ ಆದರೂ ಅದರಿಂದ ಬೇರೆ ಬೇರೆ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಆದರೆ ನಂದು ನಿಂದು ಎಂಬ ಮಣ್ಣಿಗಾಗಿ ಜಗಳವಾಡಲಾಗುತ್ತದೆ ಎಂದು ಚಿಕ್ಕ ಕಥೆಯನ್ನು ವಿವರಿಸಿದ ಶ್ರೀಗಳು, ಅನ್ಯ ಧರ್ಮಿಯ ಗ್ರಂಥಗಳಲ್ಲಿ ಶಬ್ದಗಳು ಬೇರೆ ಬೇರೆಯಾದರೆ ಜಗಳ ಉದ್ಭವಿಸಲು ಕಾರಣವಾಗುತ್ತದೆ. ಆದರೆ ನಮ್ಮದು ಹಾಗಲ್ಲಾ ನಮ್ಮ ಧರ್ಮದಲ್ಲಿ ಉಪಾಸನೆ ಎಂಬುದು ಬೇರೆ ಬೇರೆಯಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ಮಾಡಬಹುದು. ಸನಾತನ ಪದ್ದತಿಯಂತೆ ಮಂದಿರಗಳ ನಿರ್ಮಾಣದ ಕಾರ್ಯ ನಡೆಯುತ್ತಲಿವೆ. ಸ್ವರ್ಗ ಕಾಣಬೇಕಾದರೆ ಸ್ವತಃ ಸಾಯಬೇಕು ಎಂದು ಹೇಳಿದ ಶ್ರೀಗಳು, ನಮ್ಮ ದೇಶದಲ್ಲಿ ೪.೫೦ ಲಕ್ಷ ಕೋಟಿ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಗಳ ಹುಂಡಿಯಲ್ಲಿ ಹಣ ಹಾಕಲಾಗುತ್ತದೆ. ಆ ಹಣವನ್ನು ಆಪತ್ತ ಕಾಲದಲ್ಲಿ ಉಪಯೋಗಿಸಲು ತಿಳಿಸಲಾಗಿತ್ತು ಬರಗಾಲ ಭೂಕಂಪ ಆದಾಗ ಅದರಲ್ಲಿಯ ಹಣದಿಂದ ತೊಂದರೆಯನ್ನು ನಿವಾರಿಸುವ ಪದ್ದತಿ ನಮ್ಮದಾಗಿದೆ ಎಂದರು.ಶಿರೋಳದ ಶಂಕರಾನಂದ ಮಹಾಸ್ವಾಮಿಗಳು ಮಾತನಾಡಿ, ದೇಶ ಒಳ್ಳೆಯ ಸಂಸ್ಕೃತಿಯ ದೇಶವಾಗಿದೆ. ಭಹುದೊಡ್ಡ ರಾಷ್ಟ್ರವಾಗಿದ್ದು, ಹಿಂದಿನ ಋಷಿ ಮುನಿಗಳಿಂದ ೧೨ ಅಮವಾಸ್ಯೆ, ೧೨ ಹುಣ್ಣಿಮೆಗಳು ಪ್ರಚಲಿತವಾದವು. ಅದರಲ್ಲಿ ಶ್ರಾವಣ ಮಾಸದಲ್ಲಿ ಭಕ್ತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ. ಅಂತಹ ಹಬ್ಬಗಳಲ್ಲಿ ಗಣಪತಿ ಹಬ್ಬ ಒಂದಾಗಿದ್ದು, ಇದು ಹಳ್ಳಿಯಿಂದ ಜಗತ್ತಿನಾದ್ಯಂತ ವ್ಯಾಪಿಸಿದೆ ಎಂದು ಹೇಳಿದರು.ಹಿಂದೂ ಮಹಾ ಗಣಪತಿ ಮಹಾ ಮಂಡಳದ ಉಪಾಧ್ಯಕ್ಷ ಕೆಸರಟ್ಟಿಯ ಸೋಮಲಿಂಗ ಮಹಾ ಸ್ವಾಮಿಗಳು ಪ್ರಾಸ್ಥಾವಿಕ ಮಾತನಾಡಿದರು.ಮಹಾ ಮಂಡಳಿಯ ಗೌರವ ಅಧ್ಯಕ್ಷರಾದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು. ಮಹಾ ಮಂಡಳಿಯ ಗೌರವ ಕಾರ್ಯದರ್ಶಿ ವೇ.ಸಂತೋಷಬಟ್ ಜೋಶಿ, ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ, ಪ್ರಧಾನ ಕಾರ್ಯದರ್ಶಿ ಸೂರ್ಯವಂಶಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಳ್ಳಿ ಮೊದಲಾದವರು ಇದ್ದರು. ತೇಜಸ್ವೀನಿ ಡಿಸಲೆ ಸ್ವಾಗತಿಸಿ, ನಿರೂಪಿಸಿದರು. ರಾಘವೇಂದ್ರ ವಿಜಾಪೂರ ವಂದಿಸಿದರು.