ಸಾರಾಂಶ
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಶ್ರೀ ಏಳೂರು ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಪುನಃ ಕೆಲವರು ನಡೆಸುತ್ತಿದ್ದು, ಕೋಣಗಳ ಬಲಿ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಮುಖಂಡ ಡಿ.ಕೆ. ಮಲ್ಲೇಶಪ್ಪ ಮನವಿ ಮಾಡಿದ್ದಾರೆ.
- ಕೋಣಬಲಿ ನಡೆಸೇ ತೀರುತ್ತೇವೆಂದು ಕೆಲವರು ಹಠ: ಮಲ್ಲೇಶಪ್ಪ ಆರೋಪ - - -
ಕನ್ನಡಪ್ರಭ ವಾರ್ತೆ, ದಾವಣಗೆರೆಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಶ್ರೀ ಏಳೂರು ಕರಿಯಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಮುಖಂಡ ಡಿ.ಕೆ. ಮಲ್ಲೇಶಪ್ಪ ಮನವಿ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 15 ವರ್ಷಕ್ಕೊಮ್ಮೆ ದೇವಿ ಜಾತ್ರೆ ನಡೆಯುತ್ತದೆ. ಈಗಾಗಲೇ ಮಾ.18 ರಿಂದ 22 ರವರೆಗೆ ನಡೆದಿದ್ದ ಜಾತ್ರೆ ಸಂದರ್ಭದಲ್ಲಿ ಯಾವುದೇ ಪ್ರಾಣಿಬಲಿಗೆ ಅವಕಾಶ ನೀಡಿರಲಿಲ್ಲ. ಆದರೆ, ಈಗ ಗ್ರಾಮದ ಕೆಲವರು ಮತ್ತೆ ಏ.1ರಿಂದ 5ರವರೆಗೆ ಜಾತ್ರೆ ನಡೆಸಲು ಮುಂದಾಗಿದ್ದಾರೆ. ಜಾತ್ರೆಯಲ್ಲಿ ಕೋಣಬಲಿ ನೀಡಿಯೇ ತೀರುವುದಾಗಿ ಗ್ರಾಮಸ್ಥರಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಕೆಲವು ಕಡೆ ಕೋಣಗಳನ್ನು ತಂದಿಟ್ಟಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ನಮ್ಮದು ಯಾರ ವಿರೋಧವೂ ಇಲ್ಲ. ಜಾತ್ರೆ ಮಾಡಲಿ, ಆದರೆ, ಕೋಣ, ಪ್ರಾಣಿಬಲಿ ಬೇಡ ಎನ್ನುವುದು ನಮ್ಮ ಮನವಿ ಎಂದು ತಿಳಿಸಿದರು.ಜಾತ್ರೆಯಲ್ಲಿ ನಡೆಯಬಹುದಾದ ಪ್ರಾಣಿಬಲಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ, ಪೊಲೀಸ್ ಇಲಾಖೆಯವರು ಬಲಿಗೆ ತಂದಿರುವ ಕೋಣಗಳ ರಕ್ಷಿಸಿ, ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಟಿ.ತಿಪ್ಪೇಶಪ್ಪ, ಟಿ.ಸಂತೋಷ್, ಟಿ.ಸೋಮಪ್ಪ, ಎಂ.ಪಿ.ತಿಪ್ಪೇಶಪ್ಪ, ಹಳ್ಳೂರು ಚಂದ್ರಪ್ಪ ಇದ್ದರು.- - - -28ಕೆಡಿವಿಜಿ40ಃ:
ಹಿರೇಹಾಲಿವಾಣ ಏಳೂರು ಕರಿಯಮ್ಮದೇವಿ ಜಾತ್ರೆಯಲ್ಲಿ ಪ್ರಾಣಿಗಳ ಬಲಿ ತಡೆಯುವಂತೆ ಗ್ರಾಮ ಮುಖಂಡ ಡಿ.ಕೆ. ಮಲ್ಲೇಶಪ್ಪ ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.