ಸಾರಾಂಶ
ರಾಣಿಬೆನ್ನೂರ: ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶಸ್ವಾಮಿ ಸನ್ನಿಯಲ್ಲಿ ಬುಧವಾರ ಮಹಾನವಮಿಯಂದು ಸಂಜೆ 6ಕ್ಕೆ ಕಾರ್ಣಿಕೋತ್ಸವದಲ್ಲಿ `ನಾಡಿನ ಬಂಗಾರದ ಗಿಂಡಿಲೇ, ನಾಡು ಸಿರಿಯಾದಿತಲೇ ಪರಾಕ್ '''' ಎಂದು ಕಾರಣಿಕವಾಗಿದೆ. ವಿದೇಶಿ ಬಂಡವಾಳದ ಹಂಗಿಲ್ಲದೆ ಸ್ವದೇಶಿ ಜ್ಞಾನ ಪರಂಪರೆ ಮೇಲೆ ವಿಶ್ವಾಸವಿಟ್ಟರೆ ಸಂಪದ್ಭರಿತ ನಾಡು ಕಟ್ಟಲು ಸಾಧ್ಯ. ಸ್ವದೇಶಿ ಜೀವನ ಹಾಗೂ ಸ್ವದೇಶಿ ಚಿಂತನೆಯಿಂದ ನಾಡು ಸಮೃದ್ಧಿಯಾಗಲಿದೆ. ರಾಜಕೀಯವಾಗಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಸ್ಥಾನ ಸಮಿತಿ ಗೊರವಯ್ಯ ನಾಗಪ್ಪಜ್ಜ ನುಡಿದ ಕಾರ್ಣಿಕದ ವಿಶ್ಲೇಷಣೆ ಮಾಡಿದೆ. ಭಕ್ತರ ವಿಶ್ಲೇಷಣೆ: ಕೇಂದ್ರ ಮತ್ತು ರಾಜ್ಯ ನಾಯಕತ್ವ ಬದಲಾವಣೆ ಆಗುವುದಿಲ್ಲ. ನಾಯಕತ್ವವನ್ನು ಕಾನೂನಿನ ಅಡೆತಡೆಯನ್ನೂ ಮೀರಿ ಎಲ್ಲರೂ ಒಪ್ಪಿಕೊಳ್ಳಬಹುದು ಎಂಬರ್ಥದಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ. ಸದ್ಯ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ವಿಶ್ಲೇಷಣೆಯನ್ನು ಭಕ್ತರು ವ್ಯಕ್ತಪಡಿಸಿದರು.ಹರಿದು ಬಂದ ಜನಸಾಗರ: ದೇವರಗುಡ್ಡದ ಗೊರವಯ್ಯ ಅವರು ನುಡಿಯುವ ಕಾರ್ಣಿಕದ ಮೇಲೆ ಜನರಿಗೆ ಮೊದಲಿಂದಲೂ ಅಪಾರ ನಂಬಿಕೆ. ರಾಜ್ಯದ ಮೂಲೆ ಮೂಲೆಯಿಂದ ಜನಸಾಗರ ಹರಿದುಬಂದಿತ್ತು. ಪ್ರತಿ ವರ್ಷ ಆಯುಧ ಪೂಜೆಯ ದಿನ ದೇವರಗುಡ್ಡದ ಕಾರ್ಣಿಕೋತ್ಸವ ನಡೆಯುತ್ತದೆ. ಮೈಲಾರದ ಕಾರ್ಣಿಕ ''''''''ಮುಂಗಾರು ಮಳೆಯ ಭವಿಷ್ಯವಾಣಿ'''''''' ಎಂದು ನಂಬಿದರೆ. ದೇವರಗುಡ್ಡದ ಕಾರ್ಣಿಕೋತ್ಸವವನ್ನು ''''''''ಹಿಂಗಾರಿನ ಭವಿಷ್ಯವಾಣಿ'''''''' ಎಂದು ನಂಬಲಾಗುತ್ತದೆ.