ಸಾರಾಂಶ
ವಿಜಯಪುರ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯಕ್ಕೆ ಆಗಮಿಸಿದ ಪೌರಾಡಳಿತ ಸಚಿವ ರಹೀಮಖಾನ್ ಅವರನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಮಹಾನಗರ ಪಾಲಿಕೆಯ ಸದಸ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಚಿವರಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಎಲ್ಲ ಪೌರಾಡಳಿತ ಚುನಾಯಿತ ಸದಸ್ಯರ ಬೇಡಿಕೆಗಲನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡ ಅಬ್ದುಲಹಮೀದ ಮುಶ್ರೀಫ, ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಬಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಾಹಪೂರ, ಶಬ್ಬೀರ್ ಜಾಗಿರದಾರ, ಆಫ್ತಾಬ್ ಕಾದ್ರಿ ಇನಾಮದಾರ, ಚಾಂದಸಾಬ್ ಗಡಗಲಾವ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಸ ಕಾಲೇಬಾಗ, ಕಾಮೇಶ ಉಕ್ಕಲಿ, ಮಹ್ಮದ್ ಪಟೇಲ, ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೋಡೆ, ಎಂ.ಎಂ.ಮುಲ್ಲಾ (ದ್ಯಾಬೇರಿ), ದೇಸು ಚವ್ಹಾಣ, ಪೀರಾ ಜಮಖಂಡಿ, ಶಾಹಜಾನ್ ಮುಲ್ಲಾ, ರಾಜೇಶ್ವರಿ ಚೋಳಕೆ, ಬಶೀರ್ ಶೇಠ, ಫಯಾಜ್ ಕಲಾದಗಿ, ಹಾಜಿಲಾಲ್ ದಳವಾಯಿ ಮುಂತಾದವರು ಇದ್ದರು.