ಮಹಿಳೆಯರು ಧೈರ್ಯದಿಂದ ಅನ್ಯಾಯ ಎದುರಿಸಿ: ಪತ್ರಕರ್ತೆ ಸಾವಿತ್ರಿ ಮುಜುಮ್‌ದಾರ

| Published : Feb 12 2024, 01:31 AM IST / Updated: Feb 12 2024, 03:13 PM IST

ಮಹಿಳೆಯರು ಧೈರ್ಯದಿಂದ ಅನ್ಯಾಯ ಎದುರಿಸಿ: ಪತ್ರಕರ್ತೆ ಸಾವಿತ್ರಿ ಮುಜುಮ್‌ದಾರ
Share this Article
  • FB
  • TW
  • Linkdin
  • Email

ಸಾರಾಂಶ

ಮೂಢನಂಬಿಕೆ ಮೌಢ್ಯಾಚರಣೆಯು ಬೇರೂರಿದ್ದ ಕಾಲದಲ್ಲಿ ಅದರ ವಿರುದ್ಧ ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಅವರ ಇತಿಹಾಸವನ್ನು ಅರಿಯಬೇಕಾಗಿದೆ. ೧೨ನೇ ಶತಮಾನದ ಬಸವಾದಿ ಶಿವಶರಣರ ಕನಸನ್ನು ನನಸು ಮಾಡುವಲ್ಲಿ ಸಾವಿತ್ರಿಬಾಯಿ ಫುಲೆ ಅವಿರತವಾಗಿ ಶ್ರಮಿಸಿದ್ದಾರೆ

ನರಗುಂದ: ಹಿಂದುಳಿದವರ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಮೊದಲು ಧ್ವನಿ ಎತ್ತಿದ ದಿಟ್ಟ ಮಹಿಳೆಯರಾದ ಸಾವಿತ್ರಿಬಾಯಿ ಫುಲೆ ಹಾಗೂ ಅವರ ಜತೆಗೆ ಹೆಜ್ಜೆ ಹಾಕಿದ ಫಾತಿಮಾ ಶೇಖ್ ಅವರು ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. 

ಅವರಂತೆಯೆ ಎಲ್ಲ ಮಹಿಳೆಯರು ಧೈರ್ಯದಿಂದ ಅನ್ಯಾಯವನ್ನು ಎದುರಿಸಿ ಸಶಕ್ತರಾಗಿ ಬದುಕಬೇಕಿದೆ ಎಂದು ಪತ್ರಕರ್ತೆ ಸಾವಿತ್ರಿ ಮುಜುಮ್‌ದಾರ ಹೇಳಿದರು. 

ಅವರು ಭಾನುವಾರ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ದಲಿತ ಸಾಹಿತ್ಯ ಪರಿಷತ್ತು, ಗದಗ ತೋಂಟದಾರ್ಯ ಮಠದ ದಲಿತ ವಿಮೋಚನಾ ಕೇಂದ್ರ, ಭೈರನಹಟ್ಟಿಯ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಉತ್ಸವ-೨೦೨೪ ಹಾಗೂ ಶಿಕ್ಷಕ ಫಾತಿಮಾ ಶೇಖ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಆನಂತರ ಮಾತನಾಡಿದರು. 

ಮೂಢನಂಬಿಕೆ ಮೌಢ್ಯಾಚರಣೆಯು ಬೇರೂರಿದ್ದ ಕಾಲದಲ್ಲಿ ಅದರ ವಿರುದ್ಧ ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಅವರ ಇತಿಹಾಸವನ್ನು ಅರಿಯಬೇಕಾಗಿದೆ.

 ೧೨ನೇ ಶತಮಾನದ ಬಸವಾದಿ ಶಿವಶರಣರ ಕನಸನ್ನು ನನಸು ಮಾಡುವಲ್ಲಿ ಸಾವಿತ್ರಿಬಾಯಿ ಫುಲೆ ಅವಿರತವಾಗಿ ಶ್ರಮಿಸಿದ್ದಾರೆ ಎಂದರು. ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ಹಾಗೂ ಶಿರೋಳ ಮಠದ ಶಾಂತಲಿಂಗ ಶ್ರೀಗಳು, ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ತೆರೆದು ಅವರ ಬಾಳು ಹಸನಾಗಿಸುವಲ್ಲಿ ಸಾವಿತ್ರಿಬಾಯಿ ಫುಲೆ ಹಾಗೂ ಫಾತೀಮಾ ಶೇಖ್ ಅವರ ಪಾತ್ರ ಮಹತ್ತರವಾಗಿದೆ. 

ಆ ನಿಟ್ಟಿನಲ್ಲಿ ಜ. ೩ರಂದು ಫುಲೆ ಅವರ ಹೆಸರಿನಲ್ಲಿ ಶಿಕ್ಷಕಿಯರ ದಿನವನ್ನಾಗಿ ಸರ್ಕಾರ ಆಚರಿಸಬೇಕು ಎಂದು ಸರ್ಕಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಾಧಕ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ವೆಲ್ಲೂರು ಸಿದ್ದೇಶ್ವರ ಶಾಸ್ತ್ರಿಗಳು, ಸುರೇಖಾ ರಾಠೋಡ, ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ, ಹಿರಿಯ ಪ್ರಾಧ್ಯಾಪಕ ವೈ.ಎಂ. ಭಜಂತ್ರಿ, ಡಾ. ಎಚ್.ಬಿ. ಕೋಲ್ಕಾರ, ಈರಪ್ಪ ಮಾದರ, ಪ್ರೊ. ಪಿ. ಎಸ್. ಅಣ್ಣಿಗೇರಿ, ಸುಭಾಷ ಹೊದ್ಲೂರ, ಎಂ.ಡಿ. ಮಾದರ ಉಪಸ್ಥಿತರಿದ್ದರು.

ಎಂ.ಡಿ. ಮಾದರ ಸ್ವಾಗತಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಹಾಗೂ ಪೂಜಾ ಸಿಂಗೆ ಕಾರ್ಯಕ್ರಮ ನಿರ್ವಹಿಸಿದರು. ರಮೇಶ ಐನಾಪೂರ ವಂದಿಸಿದರು.