ಸಾರಾಂಶ
ಜ್ಞಾನದ ಜ್ಯೋತಿ ಬೆಳಗುವ ಮೂಲಕ ಸ್ವಾರ್ಥ ರಹಿತ ಸಮಾಜ ಕಟ್ಟುವ ಕಾಯಕ ಮಾಡಬೇಕು
ಕುರುಗೋಡು: ಜ್ಞಾನದ ಜ್ಯೋತಿ ಬೆಳಗುವ ಮೂಲಕ ಸ್ವಾರ್ಥ ರಹಿತ ಸಮಾಜ ಕಟ್ಟುವ ಕಾಯಕ ಮಾಡಬೇಕು ಎಂದು ಕೊಟ್ಟೂರು ಸಂಸ್ಥಾನ ವಿರಕ್ತ ಮಠದ ಬಸವಲಿಂಗ ಶ್ರೀ ಹೇಳಿದರು.ಸಮೀಪದ ಸಿರಿಗೇರಿ ಗ್ರಾಮದ ಕೊಟ್ಟೂರು ಗುರು ಪರಂಪರೆಯ ಶಾಖಾ ವಿರಕ್ತ ಮಠದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಮಂಗಳವಾರ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯರ ಜೀವನ ಚಂಚಲವಾಗಬಾರದು. ಇರುವಷ್ಟರಲಿಯೇ ನಿತ್ಯ ಸಂತೃಪ್ತಿಯಿಂದ ಬದುಕಬೇಕು. ದೇವರ ನಾಮಸ್ಮರಣೆ ಮಾಡುವ ಮೂಲಕ ಜೀವನ್ಮುಕ್ತಿ ಕಾಣಬೇಕು ಎಂದರು.ಮುಂದಿನ ದಿನಗಳಲ್ಲಿ ಈ ಶಾಖಾ ಮಠದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ಒತ್ತು ಕೊಟ್ಟು ಪುರಾಣ, ಕಾರ್ತಿಕೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ತಿಕೋತ್ಸವದ ಅಂಗವಾಗಿ ಮಠದಲ್ಲಿ ಬೆಳಿಗ್ಗೆಯಿಂದ ಚನ್ನಬಸವ ಶಿವಯೋಗಿರ ಕ್ರಿಯಾ ಸಮಾಧಿಗೆ ಅಭಿಷೇಕ, ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾಗಳು ಜರುಗಿದವು. ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ ಹೂ, ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.ವಕೀಲರಾದ ಬಂಟ್ರಾಳ್ ಮೃತ್ಯುಂಜಯ ಸ್ವಾಮಿ, ಕೆ.ಎಂ. ಗಂಗಾಧರಯ್ಯ ಸ್ವಾಮಿ, ಸಿ.ಎಂ. ನಾಗರಾಜಸ್ವಾಮಿ, ಡಾ.ಮೃತ್ಯುಂಜಯ ಸ್ವಾಮಿ, ಎಚ್.ಎಂ ಪ್ರಕಾಶಯ್ಯ ಸ್ವಾಮಿ, ಗೋಡೆ ಚಂದ್ರಶೇಖರ ಗೌಡ, ಬಿ. ಅಮರೇಶ ಗೌಡ, ಬಿ. ವೀರಭದ್ರಗೌಡ, ಎಸ್.ಎಂ. ನಾಗರಾಜಸ್ವಾಮಿ, ಹಾಗಲೂರು ಮಲ್ಲನಗೌಡ, ಎಸ್.ಎಂ. ಅಡಿವಯ್ಯ ಸ್ವಾಮಿ ಇದ್ದರು.
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ಮಠದಲ್ಲಿ ಜರುಗಿದ ಕಾರ್ತಿಕೋತ್ಸವದ ಧರ್ಮಸಭೆಯಲ್ಲಿ ಬಸವಲಿಂಗ ಶ್ರೀ ಆಶೀರ್ವಚನ ನೀಡಿದರು.;Resize=(128,128))
;Resize=(128,128))
;Resize=(128,128))
;Resize=(128,128))