ಯಕ್ತಾಪುರ ಗ್ರಾಮದಲ್ಲಿ ಕುಡಿಯವ ನೀರಿಗಾಗಿನ ಹಾಹಾಕಾರ ಹಾಗೂ ಜಿಲ್ಲೆಯ 250 ಹಳ್ಳಿಗಳಲ್ಲಿ ನೀರಿನ ತತ್ವಾರ ಕುರಿತು ಮಾ.5 ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಉಲ್ಲೇಖಿಸಿ, ಗುರುವಾರ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದ ಸದಸ್ಯ ಬಿ. ಜಿ. ಪಾಟೀಲ್ ಸರ್ಕಾರದ ಗಮನ ಸೆಳೆದಿದ್ದಾರೆ.