ಸಹೃದಯಿ ಕನ್ನಡಿಗರ ತಂಡದ ಕಾರ್ಯ ಶ್ಲಾಘನೀಯಸರಕಾರಿ ಶಾಲೆಗಳ ಉಳಿವಿಗಾಗಿ ಬೆಂಗಳೂರಿನ ಸಹೃದಯಿ ಕನ್ನಡಿಗರ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಖ್ಯಾತ ಗಜಲ್ ಕವಯಿತ್ರಿ ನೀಲಮ್ಮ ಬಿ. ಮಲ್ಲೆ ಹೇಳಿದರು. "ಸರ್ಕಾರಿ ಶಾಲೆಗಳ ಉಳಿಸಿ, ಬೆಳೆಸಿ " ಅಭಿಯಾನ ಅಂಗವಾಗಿ, ಸಹೃದಯಿ ಕನ್ನಡಿಗರ ಬೆಂಗಳೂರು ತಂಡ ಲಕ್ಷ್ಮೀ ನಗರ ಸರಕಾರಿ ಶಾಲೆಗೆ ಭೇಟಿ ನೀಡಿ ಶಾಲೆಗೆ ಸುಣ್ಣ ಬಣ್ಣ ಮಾಡಿ, ಬಳಿಕ ಮಕ್ಕಳಿಗೆ ಓದುವ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.