ಸಾರಾಂಶ
ಧಾರವಾಡ: ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ ಆರು ತಿಂಗಳಿಂದ ಮೂರು ವರ್ಷದ ಶಿಶುಗಳ ಪಾಲನೆ ಮತ್ತು ಪೋಷಣೆಗೆ ರಾಜ್ಯ ಸರ್ಕಾರ ‘ಕೂಸಿನ ಮನೆ’(ಶಿಶು ಪಾಲನಾ ಕೇಂದ್ರ) ಯೋಜನೆ ಜಾರಿಗೆ ತಂದಿದ್ದು, ಈಗಾಗಲೇ ಜಿಲ್ಲೆಯ 102 ಗ್ರಾಪಂಗಳಲ್ಲಿ ಕೂಸಿನ ಮನೆಗಳಿದ್ದು, ಇನ್ನುಳಿದ 44 ಕೂಸಿನ ಮನೆ ತೆರೆಯಲು ಜಿಪಂ ಕಾರ್ಯೋನ್ಮುಖವಾಗಿದೆ.
ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡುವ ಕಾರ್ಮಿಕ ಮಹಿಳೆಯರು ತಮ್ಮ ಮಕ್ಕಳ ಪೋಷಣೆಗೆ ಗಮನ ಹರಿಸಲು ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಗ್ರಾಪಂ ಕೇಂದ್ರದಲ್ಲಿ ಕೂಸಿನ ಮನೆ ತೆರೆದು ಮೂರು ವರ್ಷದೊಳಗಿನ ಮಕ್ಕಳಿಗೆ ಸುರಕ್ಷತೆ, ಪೂರಕ ಪೌಷ್ಟಿಕ ಆಹಾರ ಸೌಲಭ್ಯ ಒದಗಿಸುತ್ತಿದೆ.ಜಿಲ್ಲೆಯಲ್ಲಿ 102 ಕೂಸಿನ ಮನೆಗಳಲ್ಲಿ ಒಟ್ಟು 1344 ಮಕ್ಕಳು ನೋಂದಾಯಿಸಿಕೊಂಡಿದ್ದು, ಈ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಇನ್ನುಳಿದ 44 ಮನೆಗಳಿಗೆ ಆಯಾ ಗ್ರಾಪಂಗಳಲ್ಲಿ ಸರ್ಕಾರಿ ಕಟ್ಟಡ ಗುರುತಿಸಿದ್ದು ಸಧ್ಯದಲ್ಲಿಯೇ ಶುರುವಾಗಲಿದೆ ಎಂದು ಮಾಹಿತಿ ನೀಡಿದ ಜಿಪಂ ಸಿಇಓ ಭುವನೇಶ ಪಾಟೀಲ, ಇಲ್ಲಿ ಮಕ್ಕಳ ಪಾಲನೆ ಜತೆಗೆ ಊಟೋಪಚಾರ ಕೂಡ ಲಭ್ಯವಿದೆ. ಪೌಷ್ಟಿಕ ಆಹಾರ ಸಮಿತಿ ರಚಿಸಿ ಮಕ್ಕಳ ಬೆಳವಣಿಗೆ ಮತ್ತು ಭೌತಿಕ ಮಟ್ಟ ಹೆಚ್ಚಿಸುವ ಆಹಾರ ಮೆನುವನ್ನು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ ಎಂದರು.
ಗ್ರಾಪಂ ಕೇಂದ್ರಗಳಲ್ಲಿ ಆರಂಭಗೊಳ್ಳಲಿರುವ ಕೂಸಿನ ಮನೆಗೆ ದಾಖಲಾಗುವ ಮಕ್ಕಳ ಆರೈಕೆಗಾಗಿ ಕೇರ್ ಟೇಕರ್ಸ್‌ಗಳ ನೇಮಕ ಮಾಡಲಿದೆ. ನರೇಗಾ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ 8 ಮಹಿಳೆಯರನ್ನು ಗುರುತಿಸಿ ಅದರಲ್ಲಿ ಇಬ್ಬರನ್ನು ಕೇರ್ ಟೇಕರ್ಸ್ ಆಗಿ ರೋಟೇಷನ್ ಮೇಲೆ ಕೂಸಿನ ಮನೆ ಕೇಂದ್ರಕ್ಕೆ ಆಯ್ಕೆ ಮಾಡಬೇಕೆಂದು ಗ್ರಾಪಂಗಳಿಗೆ ಸರ್ಕಾರ ಸೂಚಿಸಿದೆ. ನರೇಗಾ ಯೋಜನೆಯಡಿ 100 ದಿನದ ಕೂಲಿ ಪಾವತಿ ಮಾಡಲಾಗುತ್ತಿದೆ. ಕೇರ್ ಟೇಕರ್ಸ್ ನೇಮಕಾತಿಗೆ 10ನೇ ತರಗತಿ ಉತ್ತೀರ್ಣರಾಗಿರುವರನ್ನು ಪರಿಗಣಿಸಿದೆ. ಅವರಿಗೆ ತಾಲೂಕು ಪಂಚಾಯಿತಿಯಿಂದ ಸೂಕ್ತ ತರಬೇತಿ ನೀಡಲಾಗಿದೆ ಎಂದವರು ತಿಳಿಸಿದರು.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಸಿನ ಮನೆಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಜಿಲ್ಲೆಯ ಎಲ್ಲ 146 ಗ್ರಾಪಂಗಳಲ್ಲಿ ಅವುಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸ್ಥಾಪಿಸಿರುವ 102 ಮನೆಗಳಲ್ಲಿ ಮಕ್ಕಳು ಬರುತ್ತಿದ್ದು, ಇದರಿಂದ ಮಹಿಳಾ ಕೂಲಿ ಕಾರ್ಮಿಕ ನರೇಗಾ ಕಾಮಗಾರಿಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದಾರೆ. ಜತೆಗೆ ಮಕ್ಕಳು ಪೌಷ್ಟಿಕ ಆಹಾರ ಪಡೆಯುತ್ತಿದ್ದು ಆರೋಗ್ಯ ಸುಧಾರಣೆಯೂ ಆಗುತ್ತಿದೆ ಎಂದು ಜಿಪಂ ಸಿಇಓ ಭುವನೇಶ ಪಾಟೀಲ ಹೇಳಿದರು.ಧಾರವಾಡ ಜಿಲ್ಲೆಯಲ್ಲಿ ಈಗಿರುವ ಕೂಸಿನ ಮನೆಗಳ ಸಂಖ್ಯೆಅಳ್ನಾವರ - 6
ಅಣ್ಣಿಗೇರಿ - 12ಧಾರವಾಡ - 40
ಹುಬ್ಬಳ್ಳಿ - 31ಕಲಘಟಗಿ - 34
ಕುಂದಗೋಳ - 34ನವಲಗುಂದ - 16
ಒಟ್ಟು - 102