ರಾಜಕೀಯ ಎನ್ನುವುದು ಚದುರಂಗದಾಟ ಎಂದು ಕೆಲವರು ಭಾವಿಸಿದ್ದಾರೆ. ಇಂದಿರಾಗಾಂಧಿ ಅವರು ಈ ರೀತಿಯ ರಾಜಕೀಯ ಮಾಡಲಿಲ್ಲ. ಯಾವುದೇ ಭಯ ಇಲ್ಲದೇ ಸಮಾಜದ ಹುಳುಕು, ತಾರತಮ್ಯ, ಅನ್ಯಾಯವನ್ನು ಜನರಿಗೆ ತಿಳಿಸಬೇಕು. ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆ ದಾಳಿ, ದೌರ್ಜನ್ಯ ಆಗಬಹುದು.
ರಾಹುಲ್ ಗಾಂಧಿ ಕಾಲ್ಗುಣ ಬಹಳ ಶಕ್ತಿ ಶಾಲಿಯಾಗಿದೆ. ನಿಮ್ಮ ಸಮಸ್ಯೆಗಳನ್ನ ಕೇಳಲು ಅಂದು ಪಾದಯಾತ್ರೆ ಮಾಡಿದ್ದರು. ಮಂಡ್ಯ ಗೆದ್ರೆ ಇಂಡಿಯಾ ಗೆಲ್ಲುತ್ತೇನೆ ಎಂಬ ವಿಶ್ವಾಸದೊಂದಿಗೆ ಇಂದು ಇಲ್ಲಿಗೆ ಬಂದಿದ್ದಾರೆ.
ದೇಶವೇ ತಲೆ ತಗ್ಗಿಸುವಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಬಜೆಟ್ನಲ್ಲಿ ನೂರು ರು.ಗಳಲ್ಲಿ 6.5 ರು.ಗಳು ಮಾತ್ರ ಒಬಿಸಿಗೆ ಮೀಸಲಾಗಿಡಲಾಗಿದೆ.